ಅರಿವಿಲ್ಲದ ಟಿಎಂಸಿ ಸೇನೆ ನಿಯೋಜನೆಯನ್ನು ದೊಡ್ಡ ವಿಚಾರ ಮಾಡುತ್ತಿದೆ: ವೆಂಕಯ್ಯ ನಾಯ್ಡು

ಸಂಪೂರ್ಣ ಮಾಹಿತಿಯನ್ನು ಪಡೆಯದೆಯೇ ತೃಣಮೂಲ ಗ್ರೆಸ್ ಪಕ್ಷವು ಸೇನಾ ನಿಯೋಜನೆ ವಿಚಾರವನ್ನು ದೊಡ್ಡ ವಿಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ...
ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು
Updated on: 

ಹೈದರಾಬಾದ್: ಸಂಪೂರ್ಣ ಮಾಹಿತಿಯನ್ನು ಪಡೆಯದೆಯೇ ತೃಣಮೂಲ ಗ್ರೆಸ್ ಪಕ್ಷವು ಸೇನಾ ನಿಯೋಜನೆ ವಿಚಾರವನ್ನು ದೊಡ್ಡ ವಿಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳ ಬಳಿ ಸೇನಾ ಪಡೆಯನ್ನು ನಿಯೋಜನೆ ಗೊಳಿಸಿದ್ದ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿಯೇ 36 ಗಂಟೆಗಳ ಕಾಲ ಕುಳಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ಅವರು, ಸೇನೆಯನ್ನು ವಿವಾದಕ್ಕೆ ಎಳೆಯುವುದು ರಾಷ್ಟ್ರದ ಹಿತಾಸಕ್ತಿಯಲ್ಲ. ಸೇನಾ ನಿಯೋಜನೆ ಕುರಿತಂತೆ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಖಂಡನೀಯವಾದದ್ದು. ಸೇನಾ ನಿಯೋಜನೆ ಕುರಿತಂತೆ ತೃಣಮೂಲ ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲದೆ ಇನ್ನಿತರೆ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.  

ಜ್ಞಾನ ಇಲ್ಲದೆಯೇ, ಸತ್ಯವನ್ನು ಅರಿಯದೆಯೇ ಹಾಗೂ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳದೆಯೇ ಸೇನಾ ನಿಯೋಜನೆಯನ್ನು ದೊಡ್ಡ ವಿಚಾರವನ್ನಾಗಿ ಮಾಡಲಾಗುತ್ತಿದೆ. ಪ್ರತೀವರ್ಷದಂತೆ ನಡೆಯುವ ಚಟುವಟಿಕೆಗಳನ್ನು ಮುಂದುವರೆಸಲಾಗಿತ್ತು. ಇದೇನು ಹೊಸದಲ್ಲ. ಈ ರೀತಿಯ ವಿವಾದಗಳಲ್ಲಿ ಭಾರತೀಯ ಸೇನೆಯನ್ನು ಎಳೆಯುವುದು ಬೇಡ ಎಂದು ತಿಳಿಸಿದ್ದಾರೆ.

ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯತಂತ್ರಗಳ ಕುರಿತಂತೆ ಇಡೀ ವಿಶ್ವವೇ ಮೋದಿಯನ್ನು ಪ್ರಶಂಸಿಸುತ್ತಿದೆ. ವಿಮಾನದಲ್ಲಿ ಇಂಧನ ಖಾಲಿಯಾದ ನಂತರ ಸಮಸ್ಯೆಗಳು ಎದುರಾಗಿದೆ. ಪಿತೂರಿ ಹಿಂದಿಸುವ ಪ್ರಮುಖ ಕಾರಣ ಇದಾಗಿದೆ. ನಗರಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ 20 ವರ್ಷಗಳಿಂದಲೂ ಸೇನೆ ತನ್ನ ಅಭ್ಯಾಸವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷವೂ ಪಶ್ಚಿಮ ಬಂಗಾಳದಲ್ಲಿ ಸೇನೆ ಅಭ್ಯಾಸವನ್ನು ಮಾಡಿತ್ತು. ಅಂದೂ ಕೂಡ ಮಮತಾ ಬ್ಯಾನರ್ಜಿಯವರೇ ಮುಖ್ಯಮಂತ್ರಿಗಳಾಗಿದ್ದರು. ಅಂದು ಮಮತಾ ಬ್ಯಾನರ್ಜಿಯವರು ಏನನ್ನೂ ಮಾತನಾಡಿರಲಿಲ್ಲ. ಇದೀಗ ಮಾತನಾಡುತ್ತಿದ್ದಾರೆ, ಕೇಂದ್ರದ ವಿರುದ್ಧ ಪಿತೂರಿಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com