ಅಸಹಿಷ್ಣುತೆ ಹೇಳಿಕೆಗೆ ವಿರೋಧ: ಶಾರುಖ್ 'ರಯೀಸ್' ಚಿತ್ರೀಕರಣದ ವೇಳೆ ವಿಹೆಚ್ ಪಿ ಪ್ರತಿಭಟನೆ

ಬಾಲಿವುಡ್'ನ ಖ್ಯಾತ ನಟ ಶಾರುಖ್ ಖಾನ್ ಈ ಹಿಂದೆ ನೀಡಿದ್ದ ಅಸಹಿಷ್ಣುತೆ ಹೇಳಿಕೆಯ ಕಿಡಿ ಇದೀಗ ಮತ್ತೆ ಉರಿಯಲು ಆರಂಭಿಸಿದ್ದು, ಇದೀಗ ಅವರ ಹೊಸ ಚಿತ್ರ ರಯೀಸ್ ಚಿತ್ರೀಕರಣಕ್ಕೆ ವಿಹೆಚ್ ಪಿ...
ನಟ ಶಾರುಖ್ ಖಾನ್
ನಟ ಶಾರುಖ್ ಖಾನ್
Updated on: 

ಭುಜ್; ಬಾಲಿವುಡ್'ನ ಖ್ಯಾತ ನಟ ಶಾರುಖ್ ಖಾನ್ ಈ ಹಿಂದೆ ನೀಡಿದ್ದ ಅಸಹಿಷ್ಣುತೆ ಹೇಳಿಕೆಯ ಕಿಡಿ ಇದೀಗ ಮತ್ತೆ ಉರಿಯಲು ಆರಂಭಿಸಿದ್ದು, ಇದೀಗ ಅವರ ಹೊಸ ಚಿತ್ರ ರಯೀಸ್ ಚಿತ್ರೀಕರಣಕ್ಕೆ ವಿಹೆಚ್ ಪಿ ವಿರೋಧ ವ್ಯಕ್ತಪಡಿಸಿದ್ದು, ಬುಧವಾರ ಪ್ರತಿಭಟನೆ ನಡೆಸುತ್ತಿದೆ.

ಗುಜರಾತ್ ಭುಜ್ ಪ್ರದೇಶದಲ್ಲಿ ಶಾರುಖ್ ಖಾನ್ ಅಭಿನಯದ ಹೊಸ ಚಿತ್ರ ರಯೀಸ್'ನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ವಿಹೆಚ್ ಪಿ ಸದಸ್ಯರು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಚಿತ್ರದ ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಹೆಚ್ ಪಿ ಸದಸ್ಯರು ಇದೀಗ ಶಾರುಖ್ ಖಾನ್ ಅವರ ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಅವರ ಫೋಟೋಗಳನ್ನು ದಹಿಸಿ ನಟನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಎಂ.ಬಿ. ಪರ್ಮರ್ ಅವರು, ಘೋಷಣೆ ಕೂಗುತ್ತಿದ್ದ ವಿಹೆಚ್ ಪಿ ಕಾರ್ಯಕರ್ತರಿಗೆ ಸ್ಥಳದಿಂದ ಹೋಗುವಂತೆ ಸೂಚಿಸಲಾಯಿತು. ಆದರೂ ಅವರು ನಮ್ಮ ಮಾತು ಕೇಳಲಿಲ್ಲ. ಹೀಗಾಗಿ ಅವರನ್ನು ಅಲ್ಲಿಂದ ಚದುರಿಸಿದೆವು ಎಂದು ಹೇಳಿದ್ದಾರೆ.

ಶಾರುಖ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗುಜರಾತ್ ವಿಹೆಚ್ ಪಿ ಪ್ರಧಾನ ಕಾರ್ಯದರ್ಶಿ ರಾಂಜೋಡ್ ಭಾರ್ವಾಡ್ ಅವರು, ನಟ ಶಾರುಖ್ ಯೋಚಿಸಿ ಮಾತನಾಡಬೇಕು. ಶಾರುಖ್ ವಾಸಿಸುತ್ತಿರುವ ದೇಶವೇ ಇಂದು  ಅವರಿಗೆ ಹೆಸರು, ಶ್ರೀಮಂತಿ ಬರುವಂತೆ ಮಾಡಿದೆ. ಇಲ್ಲದ ಅಸಹಿಷ್ಣುತೆ ಬಗ್ಗೆ ಮಾತನಾಡಿದರೆ ಅವರನ್ನು ವಿಹೆಚ್ ಪಿ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com