

ನವದೆಹಲಿ: ಶಂಕಿತ ಪಾಕಿಸ್ತಾನ ಮೂಲದ ಹ್ಯಾಕರ್ ಗಳು ಶನಿವಾರ ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಭಾರತೀಯ ಆದಾಯ ಸೇವೆಯ ಅಧಿಕೃತ ವೆಬ್‌ಸೈಟ್'ನ್ನು ಹ್ಯಾಕ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಭಾರತೀಯ ಆದಾಯ ತೆರಿಗೆ ಇಲಾಖೆಯ ಅಧಿಕೃತ http://www.irsofficersonline. gov.in ನ್ನು ಹ್ಯಾಕ್ ಮಾಡಲಾಗಿದ್ದು, ನಂತರ ಈ ವೆಬ್ ಸೈಟ್ ಯಾರಿಗೂ ಸಿಗದಂತೆ ಮಾಡಲಾಗಿದೆ.
ವೆಬ್ ಸೈಟ್ ಹ್ಯಾಕ್ ಮಾಡಿದ ನಂತರ ಈ ಬಗ್ಗೆ ಬರೆದುಕೊಂಡಿರುವ ಹ್ಯಾಕರ್ಸ್ ಗಳು, ಪಾಕಿಸ್ತಾನ ಜಿಂದಾಬಾದ್, ನಾವು ಪಾಕಿಸ್ತಾನದ ಸೈಬರ್ ಅಟಾಕ್ ಟೀಮ್. ಗೋ ಹೋಮ್ ಕಿಡ್ಡೋ ಇಂಡಿಯಾ ಕಿಂಡ್ಸ್ ಹ್ಯಾಕರ್ಸ್ ಆ್ಯಂಡ್ ಫೀಲ್ ದ ಪವರ್ ಆಫ್ ಪಾಕಿಸ್ತಾನ್ ( ಭಾರತೀಯ ಹ್ಯಾಕರ್ಸ್ ಮಕ್ಕಳೇ ಮನೆಗೆ ಹೋಗಿ, ಪಾಕಿಸ್ತಾನದ ಶಕ್ತಿ ಬಗ್ಗೆ ತಿಳಿಯಿರಿ ಎಂದು ಬರೆದುಕೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ವೆಬ್ ಸೈಟ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ವಿಷಯಗಳಿರಲಿಲ್ಲ ಎಂಬುದಕ್ಕೆ ಸಮಾಧಾನ ಪಟ್ಟಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ ಹ್ಯಾಕ್ ಆಗಿರುವ ವೆಬ್ ಸೈಟ್ ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಆದಾಯ ಇಲಾಖೆಯ ನಡುವಿನ ಅಧಿಕೃತ ಸಂವಹನಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಈ ವೆಬ್ ಸೈಟ್ ಗೆ ಹೋದರೆ ವಿ ವಿಲ್ ಬಿ ಬ್ಯಾಕ್ ಸೂನ್! ಸಾರಿ ಫಾರ್ ದಿ ಇನ್ ಕನ್ವಿನಿಯನ್ಸ್. ಕೆಲವೊಂದು ಕಾರ್ಯನಿರ್ವಹಣೆಯಿಂದಾಗಿ ವೈಬ್ ಸೈಟ್ ಕಾರ್ಯನಿರ್ವಹಣೆಯಲ್ಲಿ ತೊಡಕುಂಟಾಗಿದೆ ಎಂದು ತೋರಿಸುತ್ತಿದೆ.