ನಿತೀಶ್ ಅಸಹಾಯಕ ಹಾಗೂ ಪರಿಣಾಮಕಾರಿಯಲ್ಲದ ಸಿಎಂ: ಬಿಜೆಪಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಮೇಲಿರುವ ನಿಯಂತ್ರಣವನ್ನು ಕಳೆದುಕೊಂಡಿದ್ದು, ಇದೀಗ ಅವರು ಅಸಹಾಯಕ ಹಾಗೂ ಪರಿಣಾಮಕಾರಿಯಲ್ಲದ ಮುಖ್ಯಮಂತ್ರಿಯಾಗಿದ್ದಾರೆಂದು ಬಿಜೆಪಿ ಶನಿವಾರ ಹೇಳಿಕೊಂಡಿದೆ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Updated on: 
ಪಾಟ್ನಾ; ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಮೇಲಿರುವ ನಿಯಂತ್ರಣವನ್ನು ಕಳೆದುಕೊಂಡಿದ್ದು, ಇದೀಗ ಅವರು ಅಸಹಾಯಕ ಹಾಗೂ ಪರಿಣಾಮಕಾರಿಯಲ್ಲದ ಮುಖ್ಯಮಂತ್ರಿಯಾಗಿದ್ದಾರೆಂದು ಬಿಜೆಪಿ ಶನಿವಾರ ಹೇಳಿಕೊಂಡಿದೆ. 
ಹಿರಿಯ ಬಿಜೆಪಿ ನಾಯಕ ಹಾಗೂ ಬಿಹಾರದ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಶೇಶ್ವರ ಓಜಾ ಅವರ ಸಾವು ಇದೀಗ ರಾಜಕೀಯ ರಂಗದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಓಜಾ ಅವರ ಸಾವು ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು, ಓಜಾ ಹಾಗೂ ಅವರ ಅಣ್ಣನ ಪತ್ನಿ ಇಬ್ಬರು ಶಾಸಕರಾಗಿದ್ದಾಗ ಅವರನ್ನು ಯಾರೊಬ್ಬರು ಮುಟ್ಟಲು ಸಾಧ್ಯವಾಗಿರಲಿಲ್ಲ. ಇದೀಗ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋಲು ಕಂಡ ನಂತರ ಅವರನ್ನು ಹತ್ಯೆ ಮಾಡಲಾಗಿದೆ. 
ರಾಜ್ಯದಲ್ಲಿರುವ ಜನರು ಅಲ್ಲಿನ ಸರ್ಕಾರದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕನಿಷ್ಟ ಪಕ್ಷ ಸರ್ಕಾರ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತರಲಿದೆ ಎಂಬುದರ ಬಗ್ಗೆ ನನದೆ ನಂಬಿಕೆ. ನಿತೀಶ್ ಕುಮಾರ್ ಅವರು ಇದೀಗ ರಾಜ್ಯದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿತ್ತು. ಅಸಹಾಯಕ ಹಾಗೂ ಪರಿಣಾಮಕಾರಿಯಲ್ಲದ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ನಿತೀಶ್ ಅವರ ಮಾತು ಕೇಳುವ ಅದನ್ನು ಮುಂದುವರೆಸಿಕೊಂಡು ಹೋಗುವವರಾರು ಇಲ್ಲ. 
ಇದು ಕೇವಲ 2 ಕೊಲೆಯಿಂದ ಮಾತ್ರವಲ್ಲ. ಬಿಹಾರದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 600ಕ್ಕೂ ಹೆಚ್ಚು ಕೊಲೆಗಳಾಗಿವೆ. ರಾಜ್ಯದಲ್ಲಿ ಕೊಲೆ ಘಟನೆಗಳನ್ನು ನೋಡುತ್ತಿದ್ದರೆ, ಅಲ್ಲಿನ ಜನತೆಗೆ ಸುರಕ್ಷಿತತೆಯ ಬಗ್ಗೆ ನಂಬಿಕೆ ಹೊರಟು ಹೋಗಿದೆ. ಸಿಎಂ ನಿತೀಶ್ ಕುಮಾರ್ ಅವರು ಒಂದಾದ ಮೇಲೊಂದರಂತೆ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ನಿತೀಶ್ ಕುಮಾರ್ ಅವರು ಎಂದು ರಾಷ್ಟ್ರೀಯ ಜನತಾ ದಳದೊಂದಿಗೆ ಮೈತ್ರಿಯಾದರೋ ಅಂದಿನಿಂದ ರಾಜ್ಯದಲ್ಲಿ ಅಪರಾಧಗಳು ಹೆಚ್ಚಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ. 
ವಿಶೇಶ್ವರ್ ಓಜಾ ಅವರ ವಿರುದ್ಧ ಹಲವು ಪ್ರಕರಣಗಳಿದ್ದವು. ಆದರೆ, ಆ ಅಪರಾಧ ಕೃತ್ಯಗಳಲ್ಲಿ ಅವರು ಭಾಗಿಯಾಗಿರಲಿಲ್ಲ. 2000ಕ್ಕೂ ಮೊದಲು ಭೂಮಿ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ, ಸರ್ಕಾರ ಅದನ್ನು ತಪ್ಪು ದಾರಿಗೆ ಕರೆದೊಯ್ದಿತ್ತು. ಮುಖ್ಯಮಂತ್ರಿಯವರು ಈ ಹಿಂದೆ ರಾಜ್ಯದಲ್ಲಿ ಕೊಲೆ ಅಪರಾಧಗಳು ನಡೆದರೆ ಮೊದಲು ಪೊಲೀಸ್ ವರಿಷ್ಠಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. 600 ಕೊಲೆ ಪ್ರಕರಣಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳನ್ನು ದೂಷಿಸುತ್ತಿರುವ ಮುಖ್ಯಮಂತ್ರಿಗಳು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಹಳೆಯ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೂ, ಅಪರಾಧಗಳನ್ನು ತಡೆಯಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com