ಜೆಎನ್ ಯು ವಿವಿಯಲ್ಲಿರುವ ಪರ್ಯಾಯ, ರಚನಾತ್ಮಕ ಧ್ವನಿ ಕೇಳಲು ಕೇಂದ್ರ ಸಿದ್ಧವಿದೆ: ರವಿಶಂಕರ್ ಪ್ರಸಾದ್

ಜೆಎನ್ ಯು ವಿವಿಯ ರಚನಾತ್ಮಕ ಘೋಷಣೆಗಳಿಗೆ ಕಿವಿಗೊಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸಚಿವ ರವಿಶಂಕರ್ ಪ್ರಸಾದ್
ಸಚಿವ ರವಿಶಂಕರ್ ಪ್ರಸಾದ್
Updated on: 

ನವದೆಹಲಿ: ಜೆಎನ್ ಯು ವಿಶ್ವವಿದ್ಯಾನಿಲಯದಲ್ಲಿ ದೇಶವಿರೋಧಿ ಘೋಷಣೆ ಕೂಗಿದ ವಿವಾದದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಜೆಎನ್ ಯು ವಿವಿಯ ರಚನಾತ್ಮಕ ಘೋಷಣೆಗಳಿಗೆ ಕಿವಿಗೊಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. 
ಭಾರತದ ಪ್ರಧಾನ ಶಿಕ್ಷಣಸಂಸ್ಥೆಯಾಗಿರುವ ಜೆಎನ್ ಯು ವಿಶ್ವವಿದ್ಯಾನಿಲಯದಲ್ಲಿ ರಚನಾತ್ಮಕ, ಪರ್ಯಾಯವಾದ ಧ್ವನಿಯೊಂದಿಗೆ ಅದನ್ನು ಕೇಳಲು ಕಾತುರದಿಂದಿದ್ದೇವೆ, ಜೆಎನ್  ಯು ವಿಶ್ವವಿದ್ಯಾನಿಲಯ ಶ್ರೇಷ್ಠ ಅಧಿಕಾರಿಗಳನ್ನು, ಶಿಕ್ಷಣಾ ತಜ್ಞರನ್ನು ತಯಾರು ಮಾಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಜೆಎನ್ ಯು ವಿವಿ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಕೈಗೊಂಡಿರುವ ಕ್ರಮವನ್ನು ರವಿಶಂಕರ್ ಪ್ರಸಾದ್ ಸಮರ್ಥಿಸಿಕೊಂಡಿದ್ದು ಕೇಂದ್ರ ಸರ್ಕಾರ ದೇಶವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com