ಚೀನಾಕ್ಕಿಂತ ಭಾರತ ಬಲಿಷ್ಠವಾಗಿ ಬೆಳೆಯುತ್ತಿದೆ: ಮಸಯೋಶಿ ಸೋನ್

ಭಾರತ ದೇಶ ಚೀನಾಕ್ಕಿಂತ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಬಲವಾಗಿ ವಾದಿಸಿರುವ...
ಜಪಾನ್ ನ ಸಾಫ್ಟ್ ಬ್ಯಾಂಕ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಮಸಯೋಶಿ ಸೋನ್
ಜಪಾನ್ ನ ಸಾಫ್ಟ್ ಬ್ಯಾಂಕ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಮಸಯೋಶಿ ಸೋನ್
Updated on

ನವದೆಹಲಿ: ಭಾರತ ದೇಶ ಚೀನಾಕ್ಕಿಂತ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಬಲವಾಗಿ ವಾದಿಸಿರುವ ಜಪಾನ್ ನ ಸಾಫ್ಟ್ ಬ್ಯಾಂಕ್, ಕಳೆದ ವರ್ಷ ಭಾರತೀಯ ಕಂಪೆನಿಗಳಲ್ಲಿ 2 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೇವೆ. ಮುಂದಿನ ವರ್ಷಗಳಲ್ಲಿ ಹೂಡಿಕೆ ಮೊತ್ತವನ್ನು 10 ಶತಕೋಟಿ ಡಾಲರ್ ಗೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಭಾರತದ ಅಂತರ್ಜಾಲ ಮತ್ತು ಸೋಲಾರ್ ವಲಯಗಳು ನನಗೆ ಆಶ್ಚರ್ಯವನ್ನು ಹುಟ್ಟಿಸುತ್ತವೆ. ಆದರೆ ಭಾರತ ಸರ್ಕಾರ ಮೊಬೈಲ್ ಫೋನ್ ಮೂಲಭೂತ ಸೌಕರ್ಯವನ್ನು ಹೆಚ್ಚಿಸಬೇಕು ಮತ್ತು ನಿಧಾನಗತಿಯ ಅಂತರ್ಜಾಲ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ಸಾಫ್ಟ್ ಬ್ಯಾಂಕ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಮಸಯೋಶಿ ಸೋನ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೂಡಿಕೆ ಮಾಡುವ ಹಣವನ್ನು ಲೆಕ್ಕ ಹಾಕಬೇಕೆಂದರೆ ಹಾಕುತ್ತೇನೆ. ಮುಂದಿನ 10 ವರ್ಷಗಳಲ್ಲಿ ಹಣವನ್ನು ಯಾವುದಕ್ಕೆ ಹೂಡಿಕೆ ಮಾಡುತ್ತೇವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ನನಗೆ ಭಾರತ ದೇಶದ ಬಗ್ಗೆ ಯಾವಾಗಲೂ ಉತ್ಸುಕತೆಯಿದೆ. 21ನೇ ಶತಮಾನದಲ್ಲಿ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ. ಇದು ಭಾರತಕ್ಕೆ ಅತ್ಯುತ್ತಮ ಕಾಲವಾಗಿದೆ.

ಚೀನಾ ಕಳೆದ 10 ವರ್ಷಗಳಲ್ಲಿ ಸಾಧಿಸಿದ್ದನ್ನು ಮುಂದಿನ 10 ವರ್ಷಗಳಲ್ಲಿ ಭಾರತ ಸಾಧಿಸಲಿದೆ. ಚೀನಾಕ್ಕಿಂತಲೂ ಮುಂದುವರಿದ ರಾಷ್ಟ್ರವಾಗಲಿದೆ ಎಂದರು.
ಮಸಯೋಶಿ ಸೋನ್ ಜಪಾನಿನ ಎರಡನೇ ಶ್ರೀಮಂತ ವ್ಯಕ್ತಿ. ಅವರ ಒಟ್ಟಾರೆ ಆಸ್ತಿ ಮೌಲ್ಯ 14.1 ಶತಕೋಟಿ ಡಾಲರ್. ಭಾರತದಲ್ಲಿ ಮೂಲಭೂತ ಅವಶ್ಯಕತೆಗಳ ಕೊರತೆಯಿದೆ ಮತ್ತು ಅಂತರ್ಜಾಲ ಸೌಕರ್ಯ ಹಿಂದುಳಿದಿದೆ ಎಂದಿದ್ದಾರೆ.

ಜಪಾನ್ ಈಗಾಗಲೇ ಆನ್ ಲೈನ್ ಮಾರುಕಟ್ಟೆಯಲ್ಲಿ 627 ದಶಲಕ್ಷ ಡಾಲರ್  ಮತ್ತು ಆಸ್ತಿ ಖರೀದಿಯಲ್ಲಿ ಸಣ್ಣಮಟ್ಟಿನ ಹೂಡಿಕೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com