

ನವದೆಹಲಿ: ಬ್ರೆಜಿಲ್ ನ ರಿಯೋ ಡಿ ಜೆನೈರೋ ನಲ್ಲಿ ನಡೆಯಲಿರುವ ರಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಅಥ್ಲೀಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ.
ಜೂ.4 ರಂದು ಮೋದಿ ಅಥ್ಲೀಟ್ ಗಳನ್ನು ನವದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದು ಆಗಸ್ಟ್ ನಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವ ಅಥ್ಲೀಟ್ ಗಳಿಗೆ ಶುಭಕೋರಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ವರೆಗೂ ಸುಮಾರು 13 ಕ್ರೀಡೆಗಳಿಂದ 100 ಕ್ರೀಡಾಪಟುಗಳು ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಅಥ್ಲೀಟ್ ಗಳು ರಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ, ಇದಕ್ಕೂ ಮುನ್ನ 2012 ರಲ್ಲಿ ಲಂಡನ್ ನಲ್ಲಿ ನಡೆದ ರಿಯೋ ಒಲಂಪಿಕ್ಸ್ ಗೆ ಭಾರತದಿಂದ 83 ಕ್ರೀಡಾಪಟುಗಳು ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದದ್ದು ದಾಖಲೆಯಾಗಿತ್ತು. ಈ ಸಾಲಿನಲ್ಲಿ ಸುಮಾರು 110 ಕ್ರೀಡಾಪಟುಗಳು ಭಾರತದಿಂದ ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.