ದೇಶ

ಶೌಚಾಲಯಕ್ಕಾಗಿ ಪತಿಗೆ ವಿಚ್ಚೇದನ ನೀಡಲು ಮುಂದಾದ ನವ ವಧು

ಬಿಹಾರದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸದ ಪತಿಗೆ ವಿಚ್ಚೇದನ ನೀಡುವುದಾಗಿ...

ಶೌಚಾಲಯಕ್ಕಾಗಿ ಪತಿಗೆ ವಿಚ್ಚೇದನ ನೀಡಲು ಮುಂದಾದ ನವ ವಧು
ಸಾಂದರ್ಭಿಕ ಚಿತ್ರ
Published On :
ಪಾಟ್ನಾ: ಬಿಹಾರದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸದ ಪತಿಗೆ ವಿಚ್ಚೇದನ ನೀಡುವುದಾಗಿ ಘೋಷಿಸಿದ್ದಾರೆ.
ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಖೋತವ ಗ್ರಾಮ ಪಂಚಾಯ್ತಿಯಲ್ಲಿ ಅರ್ಚನಾ ಗೌತಮ್ ಅವರು ಪದೇಪದೆ ಹೇಳಿದರು ಶೌಚಾಲಯ ನಿರ್ಮಿಸದ ತನ್ನ ಪತಿ ಬಬ್ಲು ಕುಮಾರ್ ಗೆ ವಿಚ್ಚೇದನ ನೀಡುವುದಾಗಿ ಗುರುವಾರ ಹೇಳಿದ್ದಾರೆ.
'ಮಲ, ಮೂತ್ರ ವಿಸರ್ಜನೆಗೆ ಬಯಲಿಗೆ ಹೋಗುವಂತೆ ನನಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ಬಯಲಿಗೆ ಹೋದಾಗ ಜಮೀನಿನ ಮಾಲೀಕರು ಪದೇಪದೆ ತನಗೆ ಅವಮಾನ ಮಾಡುತ್ತಿದ್ದಾರೆ' ಎಂದು ಅರ್ಚನಾ ತನ್ನ ಅಳಲು ತೊಡಿಕೊಂಡಿದ್ದಾರೆ.
'ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ನನ್ನ ಪತಿಗೆ ಕೇಳಿದರೆ, ಅವರು ನಿಮ್ಮ ಅಪ್ಪ, ಅಮ್ಮನಿಗೆ ಹೇಳು ಕಟ್ಟಿಸುತ್ತಾರೆ' ಅಂತ ಉಡಾಫೆ ಉತ್ತರ ನೀಡುತ್ತಿರುವುದಾಗಿ ಅರ್ಚನಾ ಆರೋಪಿಸಿದ್ದಾರೆ.
ಕಳೆದ ಮೇ ನಲ್ಲಿ ಅರ್ಚನಾ ಹಾಗೂ ಬಬ್ಲು ಮದುವೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.