ರಿಟ್ರೀಟ್ ಸೆರಮನಿಯಲ್ಲಿ ಕೈಕೈ ಮಿಲಾಯಿಸಿದ ಭಾರತ-ಪಾಕ್ ಸೈನಿಕರು: ವಿಡಿಯೋ ವೈರಲ್

ಭಾರತ-ಪಾಕಿಸ್ತಾನದ ಹುಸೇನ್ ವಾಲಾ ಗಡಿಯಲ್ಲಿ ನಡೆದ 40 ನಿಮಿಷಗಳ ಧ್ವಜ ಇಳಿಸುವ ಕಾರ್ಯಕ್ರಮದಲ್ಲಿ ಭಾರತ-ಪಾಕ್ ಸೈನಿಕರು ಕೈಕೈ ಮಿಲಾಯಿಸಿದ ವಿಡಿಯೋ...
ಭಾರತ ಪಾಕ್ ಯೋಧರು
ಭಾರತ ಪಾಕ್ ಯೋಧರು

ಚಂಡೀಗಢ: ಭಾರತ-ಪಾಕಿಸ್ತಾನದ ಹುಸೇನ್ ವಾಲಾ ಗಡಿಯಲ್ಲಿ ನಡೆದ 40 ನಿಮಿಷಗಳ ಧ್ವಜ ಇಳಿಸುವ ಕಾರ್ಯಕ್ರಮದಲ್ಲಿ ಭಾರತ-ಪಾಕ್ ಸೈನಿಕರು ಕೈಕೈ ಮಿಲಾಯಿಸಿದ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ವಾಘಾ ಗಡಿ ದ್ವಾರಕ್ಕೆ ಸಮೀಪ ಇರುವ ಹುಸೈನಿವಾಲಾ ರಾಷ್ಟ್ರೀಯ ಹುತಾತ್ಮರ ಸ್ಮಾರಕದಲ್ಲಿ 1959ರಿಂದಲೂ ದಿನ ನಿತ್ಯ ಉಭಯ ದೇಶಗಳ ಧ್ವಜವನ್ನು ಇಳಿಸುವ ರಿಟ್ರೀಟ್ ಸೆರಮನಿ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಈ ಮಧ್ಯೆ ಇದೇ ತಿಂಗಳ ಪ್ರಾರಂಭದಲ್ಲಿ ದೈನಂದಿನ ಕಾರ್ಯಕ್ರಮವು ವಿಧಿವತ್ತಾಗಿ ನಡೆಯುತ್ತಿತ್ತು. ಈ ವೇಳೆ ಬಿಎಸ್ಎಫ್ ಜವಾರು ಮತ್ತು ಪಾಕ್ ರೇಂಜರ್ ಗಳು ಕೈಕೈ ಮಿಲಾಯಿಸಿದ್ದಾರೆ.

ಭಾರತ-ಪಾಕ್ ಸೈನಿಕರು ಕಾದಾಡಿಕೊಳ್ಳುತ್ತಿದ್ದಂತೆ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿದೆ. ಇತ್ತಾ ನೂರಾರು ಭಾರತೀಯರು ಅತ್ತಾ ಪಾಕ್ ಪ್ರಜೆಗಳು ಸೇರಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com