ಭಾರತ ಬಿಟ್ಟು ವಿದೇಶಕ್ಕೆ ಹಾರಿದ್ದಾರಾ ಉದ್ಯಮಿ ವಿಜಯ ಮಲ್ಯ?

ಹಲವು ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರು. ಸಾಲದ ಹೊರೆಯನ್ನು ಮೈಮೇಲೆ ಎಳೆದುಕೊಂಡಿರುವ ಉದ್ಯಮಿ ವಿಜಯ ಮಲ್ಯ ಅವರು ಈಗಾಗಲೇ ದೇಶ ಬಿಟ್ಟು...
ವಿಜಯ ಮಲ್ಯ
ವಿಜಯ ಮಲ್ಯ

ನವದೆಹಲಿ: ಹಲವು ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರು. ಸಾಲದ ಹೊರೆಯನ್ನು ಮೈಮೇಲೆ ಎಳೆದುಕೊಂಡಿರುವ ಉದ್ಯಮಿ ವಿಜಯ ಮಲ್ಯ ಅವರು ಈಗಾಗಲೇ ದೇಶ ಬಿಟ್ಟು ಹೋಗಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.

ಖಾಸಗಿ ವಿಮಾನದ ಮೂಲಕ ವಿಜಯ ಮಲ್ಯ ಅವರು ಭಾರತದಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಆ ವಿಮಾನದಲ್ಲಿ ಕೆಲ ರಾಜಕಾರಣಿಗಳು, ಉದ್ಯಮಿಗಳು, ಬ್ಯಾಂಕರ್‌ಗಳು ಹಾಗೂ ಪತ್ರಕರ್ತರೂ ಇದ್ದರು ಎಂದು ಆಂಗ್ಲ ಚಾನೆಲ್ ವೊಂದು ವರದಿ ಮಾಡಿದೆ.

ವಿಜಯ ಮಲ್ಯ ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಬೇಕು, ಡಿಯಾಜಿಯೋ ಡೀಲ್ ಮೊತ್ತ 515 ಕೋಟಿ ಪಡೆಯದಂತೆ ನಿರ್ಬಂಧ ಹೇರಬೇಕು ಎಂದು ಎಸ್‌ಬಿಐ ಸೇರಿದಂತೆ 17 ಬ್ಯಾಂಕುಗಳ ಒಕ್ಕೂಟ ಪ್ರಯತ್ನ ಮಾಡುತ್ತಿರುವಂತೆಯೇ ಮಲ್ಯ ದೇಶ ತೊರೆದಿರುವ ಸುದ್ದಿ ಬಂದಿದೆ.

ಮಲ್ಯ ಅವರು ಮಾರ್ಚ್ ಒಂದರಂದೇ ಭಾರತ ತೊರೆದು ಲಂಡನ್ ತಲುಪಿದ್ದಾರೆ, ಅಲ್ಲಿಂದ ಜಿನಿವಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com