ವಿವಾಹವಾಗಿ ಪುರುಷತ್ವ ಸಾಬೀತುಪಡಿಸಲು ಯೋಗಿ ಆದಿತ್ಯನಾಥ್ ಗೆ ಆಜಂ ಖಾನ್ ಸವಾಲು

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಮದುವೆಯಾಗಿ ತಮ್ಮ ಪುರುಷತ್ವವನ್ನು ಸಾಬೀತುಪಡಿಸಲಿ ಎಂದು ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಸವಾಲು ಹಾಕಿದ್ದಾರೆ.
ಆಜಂ ಖಾನ್
ಆಜಂ ಖಾನ್

ಗೋರಖ್ ಪುರ: ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಮದುವೆಯಾಗಿ ತಮ್ಮ ಪುರುಷತ್ವವನ್ನು ಸಾಬೀತುಪಡಿಸಲಿ ಎಂದು ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಸವಾಲು ಹಾಕಿದ್ದಾರೆ.
ಸಂಸದ ಯೋಗಿ ಆದಿತ್ಯನಾಥ್ ಅವರೊಂದಿಗಿನ ಸಂಬಂಧವನ್ನು ಸರಿಪಡಿಸಿಕೊಳ್ಳುವುದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಆಜಂ ಖಾನ್, ಮೊದಲು ಯೋಗಿ ಆದಿತ್ಯನಾಥ್ ವಿವಾಹವಾಗಿ ತಮ್ಮ ಪೀಳಿಗೆಯನ್ನು ಮುಂದುವರೆಸಲಿ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ಅವರ ತಲಾಕ್ ಕುರಿತಾದ ಹೇಳಿಕೆಗೂ ಪ್ರತಿಕ್ರಿಯೆ ನೀಡಿರುವ ಆಜಂ ಖಾನ್, ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿ ಬಗ್ಗೆ ಮಾತನಾಡುವುದು ಮಹಿಳೆಯರಿಗೆ  ಮಾಡುವ  ಅವಮಾನ  ಎಂದು ಹೇಳಿದ್ದಾರೆ.  
ಉತ್ತರ ಪ್ರದೇಶ ಸಚಿವರು ಆಗಿರುವ ಆಜಂ ಖಾನ್, ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com