ಜಮ್ಯೂ: ಹೋಮ್ ಗಾರ್ಡ್ ಸೇರಿ ಮೂವರು ವ್ಯಕ್ತಿಗಳನ್ನು ನಕ್ಸಲರು ಗುಂಡಿಕ್ಕಿ ಕೊಂದಿರುವ ಘಟನೆ ನಿನ್ನೆ ರಾತ್ರಿ ಬಿಹಾರದ ಜಮ್ಯೂ ಜಿಲ್ಲೆಯ ಚಕೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ-ಜಾರ್ಖಂಡ್ ಗಡಿಭಾಗದಲ್ಲಿರುವ ಮೂಂಗಿ ಹಳ್ಳಿಯಲ್ಲಿ 12ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಕ್ಸಲರು ಹೋಮ್ ಗಾರ್ಡ್ ಮತ್ತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂಬ ಅನುಮಾನದ ಮೇಲೆ ಇಬ್ಬರು ವ್ಯಕ್ತಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ.
ಈ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಕ್ಸಲರ ಬಂಧನಕ್ಕಾಗಿ ಕೇಂದ್ರ ಮೀಸಲಾತಿ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿನ್ನೆ ಕಾರ್ಯಾಚರಣೆ ವೇಳೆ ಇಬ್ಬರು ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇಂದು ನಕ್ಸಲರು ದಾಳಿ ಮೂವರು ಹತ್ಯೆ ಮಾಡಿದ್ದಾರೆ.