ಬಿಹಾರ: ಶಂಕಿತ ನಕ್ಸಲರಿಂದ ಹಾಡಹಗಲೇ ಪೊಲೀಸ್ ಅಧಿಕಾರಿ ಹತ್ಯೆ

ಹಾಡಹಗಲೇ ಪೊಲೀಸ್ ಅಧಿಕಾರಿಯನ್ನು ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಗಯಾ: ಹಾಡಹಗಲೇ ಪೊಲೀಸ್ ಅಧಿಕಾರಿಯನ್ನು ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.

ಕೊಟ್ಚಿ ಠಾಣೆಯ  ಅನ್ಸಾರಿ ಎಂಬ ಪೊಲೀಸ್ ಅಧಿಕಾರಿಯ ಮೇಲೆ. ಬೈಕ್ ನಲ್ಲಿ ಬಂದ ಶಂಕಿತ ನಕ್ಸಲರು ಗುಂಡಿನ ದಾಳಿ ನಡೆಸಿದ್ದರಿಂದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಡಿಜಿಪಿ ಸೌರಬ್ ಕುಮಾರ್ ಹೇಳಿದ್ದಾರೆ.

ಕೊಟ್ಚಿ ಗಯಾದಿಂದ ಸುಮಾರು 125 ಕಿಮೀ  ದೂರದಲ್ಲಿದ್ದು, ದಾಳಿ ನಡೆಯುವಾಗ ಅನ್ಸಾರಿ ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದರು ಎಂದು ಅವರು ಹೇಳಿದ್ದಾರೆ. ಸ್ಥಳಕ್ಕೆ ಅರೆಸೇನಾ ಪಡೆ ಮತ್ತು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com