

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯಿರುವ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ ಎಂದು ಭಾನುವಾರ ತಿಳಿದುಬಂದಿದೆ.
ಕಳೆದ ರಾತ್ರಿ 9.15ರ ಸುಮಾರಿಗೆ ಪಾಕಿಸ್ತಾನ ಸೇನೆ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿತ್ತು. ದಾಳಿ ಇಂದು ಬೆಳಿಗಿನ ಜಾವ 3 ಗಂಟೆಯವರೆಗೂ ಮುಂದುವರೆದಿತ್ತು. 5 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವುನೋವುಗಳ ಸಂಭವಿಸಿಲ್ಲ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ಗಡಿಯಲ್ಲಿ ಪಾಕಿಸ್ತಾನ ಸೇನೆ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ಗಳನ್ನು ನಡೆಸಿತ್ತು. ಆದರೆ, ದಾಳಿಯಲ್ಲಿ ಯಾವುದೇ ನಷ್ಟಗಳು ಸಂಭವಿಸಿಲ್ಲ ಎಂದು ಬಿಎಸ್ಎಫ್ ವಕ್ತಾರ ಸುಭೇಂದು ಭಾರದ್ವಾಜ್ ಅವರು ಹೇಳಿದ್ದಾರೆ.
ಹೀರಾನಗರ ಮತ್ತು ಸಾಂಬಾ ಕಸೆಕ್ಟರ್ ನಲ್ಲೂ ಪಾಕಿಸ್ತಾನ ಸೇನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದಾಳಿ ಮಾಡಿತ್ತು. 8ಗಂಟೆಯವರೆಗೂ ದಾಳಿ ಮುಂದುವರೆದಿತ್ತು ಎಂದು ಅವರು ತಿಳಿಸಿದ್ದಾರೆ.