ದಲೈಲಾಮಾ ಭೇಟಿ: ಭಾರತದ ಆಂತರಿಕ ವಿಚಾರದಲ್ಲಿ ಚೀನಾ ತಲೆ ಹಾಕಬಾರದು- ಕೇಂದ್ರ

ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಧಾರ್ಮಿಕವಾಗಿಯೇ ಹೊರತು, ರಾಜಕೀಯವಾಗಿ ಅಲ್ಲ. ಹೀಗಾಗಿ ಈ ವಿಚಾರ ಸಂಬಂಧ ಚೀನಾ ವಿವಾದಗಳನ್ನು ಸೃಷ್ಟಿಸಬಾರದು...
ದಲೈಲಾಮಾ
ದಲೈಲಾಮಾ
Updated on: 
ನವದೆಹಲಿ: ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಧಾರ್ಮಿಕವಾಗಿಯೇ ಹೊರತು, ರಾಜಕೀಯವಾಗಿ ಅಲ್ಲ. ಹೀಗಾಗಿ ಈ ವಿಚಾರ ಸಂಬಂಧ ಚೀನಾ ವಿವಾದಗಳನ್ನು ಸೃಷ್ಟಿಸಬಾರದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. 
ಅರುಣಾಚಲ ಪ್ರದೇಶದಲ್ಲಿ ಏ.4 ರಿಂದ 13ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದಲೈಲಾಮಾ ಅವರು ಭಾಗವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚೀನಾ ತೀವ್ರ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸುತ್ತಿದೆ. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ದಲೈಲಾಮಾ ಅವರು ಗೌರವಯುತ ಗುರುಗಳಾಗಿದ್ದು, ಭಾರತದ ಜನತೆ ಅವರನ್ನು ಗೌರವಿಸುತ್ತದೆ. ದಲೈಲಾಮಾ ಭೇಟಿ ಧಾರ್ಮಿಕವಾಗಿದ್ದು, ರಾಜಕೀಯ ಪ್ರೇರಿತವಲ್ಲ. ಭೇಟಿ ವೇಳೆ ದಲೈಲಾಮಾ ಅವರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದು, ಭಾರತದ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಈ ವಿಚಾರ ಸಂಬಂಧ ವಿವಾದವನ್ನು ಸೃಷ್ಟಿಸಬಾರದು ಎಂದು ಹೇಳಿದ್ದಾರೆ. 
ಭಾರತ ಚೀನಾ ನೀತಿಗಳನ್ನು ಗೌರವಿಸುತ್ತದೆ. ಇದೇ ರೀತಿಯ ಪ್ರತಿಕ್ರಿಯೆಯನ್ನೇ ಚೀನಾ ರಾಷ್ಟ್ರದಿಂದಲೂ ಭಾರತ ಬಯಸುತ್ತದೆ. ಭಾರತ ಚೀನಾ ರಾಷ್ಟ್ರದ ಆಂತರಿಕ ವಿಚಾರದಲ್ಲಿ ತಲೆ ಹಾಕಿಲ್ಲ. ಚೀನಾ ಕೂಡ ಭಾರತದ ಆಂತರಿಕ ವಿಚಾರಗಳಲ್ಲಿ ತಲೆ ಹಾಕಬಾರದು. ಅರುಣಾಚಲ ಪ್ರದೇಶ ಜನತೆ ನೆರೆರಾಷ್ಟ್ರದೊಂದಿಗೆ ಉತ್ತಮ ಸಂಬಂಧದೊಂದಿಗೆ ಇರಲು ಬಯಸುತ್ತದೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ದಲೈಲಾಮ ಭೇಟಿ ಕುರಿತು "ಕೃತಕ ವಿವಾದ" ಸೃಷ್ಟಿ ಬೇಡ: ಚೀನಾಗೆ ಭಾರತ ಎಚ್ಚರಿಕೆ
ದಲೈಲಾಮ ಅವರ ಭಾರತ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಅನಗತ್ಯ ವಿವಾದ ಸೃಷ್ಟಿ ಬೇಡ ಎಂದು ಕೇಂದ್ರ ವಿದೇಶಾಂಗ ಇಲಾಖೆ ಚೀನಾಗೆ ಪರೋಕ್ಷ ತಿರುಗೇಟು ನೀಡಿದೆ.

ದಲೈಲಾಮಾ ಅವರು ಓರ್ವ ಧಾರ್ಮಿಕ ಗುರುವಾಗಿದ್ದು, ಅವರ ಲಕ್ಷಾಂತರ ಅನುಯಾಯಿಗಳು ಭಾರತದಲ್ಲಿದ್ದಾರೆ. ಅಂತೆಯೇ ಭಾರತವನ್ನು ಕೂಡ ದಲೈಲಾಮ ಬಹಳ ಪ್ರೀತಿಯಿಂದ ಕಾಣುತ್ತಿದ್ದು, ಭಾರತೀಯರು ಕೂಡ ಅವರನ್ನು ಗೌರವದಿಂದ ಕಾಣುತ್ತಾರೆ. ದಲೈಲಾಮ ಓರ್ವ ಧಾರ್ಮಿಕ ಗುರುವಾಗಿ ಮಾತ್ರವೇ ಭಾರತಕ್ಕೆ ಆಗಮಿಸಿದ್ದು, ಧಾರ್ಮಿಕ ಕಾರಣದಿಂದಾಗಿ ಮಾತ್ರ ವಿವಿಧ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಇದಕ್ಕೆ ಯಾವುದೇ ರೀತಿ ಬಣ ಬಳಿಯುವ ಪ್ರಯತ್ನ ಬೇಡ ಎಂದು ಕೇಂದ್ರ ವಿದೇಶಾಂಗ ಇಲಾಖೆ ಚೀನಾಗೆ ಖಡಕ್ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com