80 ಮೀ ಉದ್ದದ ಸುರಂಗ ಮಾರ್ಗ ಪತ್ತೆ ಹಚ್ಚಿದ ಬಿಎಸ್ಎಫ್!

ಕಿಶನಗಂಜ್'ಗೆ ಹೊಂದಿಕೊಂಡಿರುವ ಉತ್ತರ ಬಂಗಾಳದ ಚೋಪ್ರೋ-ಪತೇಪುರ ಗಡಿ ಬಳಿ ಇರುವ ಚಹಾ ತೋಟವೊಂದರ ಮೂಲಕ ಅಕ್ರಮ ಜಾನುವಾರು ಸಾಗಾಟಗಾರರು ತೋಡಿರುವ 80 ಮೀ ಉದ್ದದ ಸುರಂಗ ಮಾರ್ಗವೊಂದನ್ನು ಗಡಿ ಭಧ್ರತಾ ಪಡೆ (ಬಿಎಸ್ಎಫ್) ಬುಧವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಿಶನಗಂಜ್: ಕಿಶನಗಂಜ್'ಗೆ ಹೊಂದಿಕೊಂಡಿರುವ ಉತ್ತರ ಬಂಗಾಳದ ಚೋಪ್ರೋ-ಪತೇಪುರ ಗಡಿ ಬಳಿ ಇರುವ ಚಹಾ ತೋಟವೊಂದರ ಮೂಲಕ ಅಕ್ರಮ ಜಾನುವಾರು ಸಾಗಾಟಗಾರರು ತೋಡಿರುವ 80 ಮೀ ಉದ್ದದ ಸುರಂಗ ಮಾರ್ಗವೊಂದನ್ನು ಗಡಿ ಭಧ್ರತಾ ಪಡೆ (ಬಿಎಸ್ಎಫ್) ಬುಧವಾರ ಪತ್ತೆ ಹಚ್ಚಿದೆ. 
ಗಡಿಯಲ್ಲಿ ಬೇಲಿ ನಿರ್ಮಾಣದಿಂದ ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಾಣಿಕೆಗೆ ಸಮಸ್ಯೆಗಳು ಎದುರಾಗಿರುವುದರಿಂದ ಕಳ್ಳಸಾಗಾಟಗಾರರು ಬೇಲಿಯ ಕೆಳಗಿನಿಂದ ಸುರಂಗ ಮಾರ್ತವನ್ನು ತೋಡುತ್ತಿದ್ದರು ಎಂದು ಬಿಎಸ್ಎಫ್'ನ ಉಪ ಹಾ ನಿರ್ದೇಶ ದೇವಿ ಶರಣ್ ಸಿಂಗ್ ಅವರು ಹೇಳಿದ್ದಾರೆ. 
ಜಾನುವಾರಿಗಳ ಕಳ್ಳ ಸಾಗಾಣಿಕೆದಾರರು ಸುದೀರ್ಘ ಕಾಲದಿಂದ ರಾತ್ರಿ ಸಮಯದಲ್ಲಿ ಚಹಾತೋಟದ ಮೂಲಕ ಸರಂಗವನ್ನು ತೋಡುತ್ತಿದ್ದರು. ಸುರಂಗ ಪತ್ತೆಯಾಗಿರುವ ಹಿನ್ನಲೆಯಲ್ಲಿ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತ 4,096 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com