ಡೋಕ್ಲಾಮ್ ವಿವಾದ: ಈ ಬಾರಿ ಭಾರತ, ಚೀನಾ ನಡುವೆ ಪೂರ್ಣ ಪ್ರಮಾಣದ ಯುದ್ಧ- ಮೇಘ್ನಾದ್ ದೇಸಾಯಿ ಭವಿಷ್ಯ

ಸಿಕ್ಕಿಂ ಸಮೀಪದ ಡೋಕ್ಲಾಮ್ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟು ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಬ್ರಿಟನ್ ನ ಆರ್ಥಿಕ ತಜ್ಞ ರಾಜಕಾರಣಿ ಮೇಘ್ನಾಡ್...
ಡೋಕ್ಲಾಮ್ ವಿವಾದ: ಈ ಬಾರಿ ಭಾರತ, ಚೀನಾ ನಡುವೆ ಪೂರ್ಣ ಪ್ರಮಾಣದ ಯುದ್ಧ- ಮೇಘ್ನಾದ್ ದೇಸಾಯಿ ಭವಿಷ್ಯ
Updated on: 
ನವದೆಹಲಿ: ಸಿಕ್ಕಿಂ ಸಮೀಪದ ಡೋಕ್ಲಾಮ್ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟು ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಬ್ರಿಟನ್ ನ ಆರ್ಥಿಕ ತಜ್ಞ ರಾಜಕಾರಣಿ ಮೇಘ್ನಾದ್ ದೇಸಾಯಿಯವರು ಭವಿಷ್ಯ ನುಡಿದಿದ್ದಾರೆ. 
ಡೋಕ್ಲಾಮ್ ವಿವಾದ ಸಂಬಂಧ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಡೋಕ್ಲಾಮ್ ಬಿಕ್ಕಟ್ಟು ದಕ್ಷಿಣ ಚೀನಾ ಸಮುದ್ರ ವಿವಾದದಂತಿದೆ. ಒಂದು ವೇಳೆ ಯುದ್ಧ ನಡೆದರೆ, ಬಹುರಂಗಗಳಲ್ಲಿ ಇದು ನಡೆಯಲಿದೆ. ಭಾರತದ ನೆರವಿಗೆ ಅಮೆರಿಕ ಧಾವಿಸಲಿದೆ ಎಂದು ಹೇಳಿದ್ದಾರೆ. 
ಡೋಕ್ಲಾಮ್ ಬಿಕ್ಕಟ್ಟು ಸಂಪೂರ್ಣ ಕೈತಪ್ಪಿ ಯಾವಾಗ ಹಾಗೂ ಎಲ್ಲಿ ಯುದ್ಧ ನಡೆಯುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿಯಲ್ಲ. ಚೀನಾ ಜೊತೆಗೆ ತಿಂಗಳಲ್ಲಿ ಭಾರತ ಪೂರ್ಣ ಪ್ರಮಾಣದ ಯುದ್ಧಕ್ಕಿಳಿಯಬಹುದು. ಆ ಹಂತದಲ್ಲಿ ಅದನ್ನು ನಿಯಂತ್ರಿಸಲು ಆಗದು. 
ಒಂದು ವೇಳೆ ಯುದ್ಧ ನಡೆದರೆ ಅದು ಅಮೆರಿಕ-ಚೀನಾ ಸಮರವಾಗಲಿದ್ದು, ಭಾರತವು ಅಮೆರಿಕ ಜೊತೆ ಇರಲಿದೆ. ಆದರೆ, ಚೀನಾದ ಸೇನಾ ಸಾಮರ್ಥ್ಯವನ್ನು ಭಾರತ ಲಘುವಾಗಿ ಪರಿಗಣಿಸಬಾರದು. ಏಕೆಂದರೆ ಚೀನಾ ಸೇನೆ ಪಾಕಿಸ್ತಾನ ಸೇನೆಯಂತಲ್ಲ ಎಂದು ಬ್ರಿಟನ್ ನ ರಾಜ್ಯಸಭೆ ಹೌಸ್ ಆಫ್ ಲಾರ್ಡ್ಸ್ ಸದಸ್ಯರೂ ಆಗಿರುವ ಮೇಘ್ನಾದ್ ದೇಸಾಯಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com