ಪುದುಕೊಟ್ಟೈ: ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಮತ್ತೆ ದಾಳಿ ನಡೆಸಿದ್ದು, ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ 9 ತಮಿಳುನಾಡು ಮೀನುಗಾರರನ್ನು ಮಂಗಳವಾರ ಬಂಧನಕ್ಕೊಳಪಡಿಸಿದೆ.
ಪುಡುಕೊಟ್ಟೈ ನ ಜಗದಪಟ್ಟಿನಂ ಸಾಗರ ತೀರದಲ್ಲಿ ಮೀನುಗಾರಿಕೆಗೆ ಕಡಲಿಗಿಳಿದಿದ್ದ 9 ಮೀನುಗಾರರುತಮ್ಮ ದೋಣಿ ಮತ್ತು ಬಲೆಗಳೊಂದಿಗೆ ನಿನ್ನೆ ಸಂಜೆ ಇಳಿದಿದ್ದರು. ಈ ವೇಳೆ ಶ್ರೀಲಂಕಾ ನೌಕಾಪಡೆಯವರು ಬಂಧನಕ್ಕೊಳಪಡಿಸಿದ್ದಾರೆ. ಬಂಧನದ ಬಳಿಕ ದೋಣಿ ಮತ್ತು ಮೀನುಗಾರಿಕಾ ಬಲೆಗಳನ್ನು ವಶಕ್ಕೆಪಡಿಸಿಕೊಕಂಡಿದ್ದಾರೆಂದು ತಿಳಿದುಬಂದಿದೆ.
ಬಂಧನಕ್ಕೊಳಗಾಗಿರುವ 9 ಮೀನುಗಾರರನ್ನು ಕಂಗೆಸನ್ಥುರೈ ಬಂದರಿಗೆ ಕರೆದುಕೊಂಡು ಹೋಗಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಜಲಸಂಧಿಯಲ್ಲಿನ ಅಂತರಾಷ್ಟ್ರೀಯ ಸಮುದ್ರ ಗಡಿ ದಾಟಿ ತನ್ನ ಜಲಸೀಮೆಯಲ್ಲಿ ಅಕ್ರಮವಾಗಿ ಮೀನುಗಾರಿಗೆ ನಡೆಸುತ್ತಿದ್ದಾರೆಂಬ ಆರೋಪದಡಿ ಶ್ರೀಲಂಕಾ ನೌಕಾಪಡೆ ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸುತ್ತಿದೆ.