ಬಿಹಾರ, ಉತ್ತರ ಪ್ರದೇಶದಲ್ಲಿ ಮುಂದುವರೆದೆ ನೆರೆ; ಸಾವಿನ ಸಂಖ್ಯೆ 170ಕ್ಕೆ ಏರಿಕೆ!

ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನೆರೆ ಹಾವಳಿ ಮತ್ತಷ್ಟು ಬಿಗಡಾಯಿಸಿದ್ದು, ಉಭಯ ರಾಜ್ಯಗಳ 15 ಜಿಲ್ಗೆಗಳಲ್ಲಿ ಭಾರಿ ಪ್ರವಾಹ ಸಂಭವಿಸಿದೆ.
ಪ್ರವಾಹ
ಪ್ರವಾಹ
Updated on: 

ನವದೆಹಲಿ: ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನೆರೆ ಹಾವಳಿ ಮತ್ತಷ್ಟು ಬಿಗಡಾಯಿಸಿದ್ದು, ಉಭಯ ರಾಜ್ಯಗಳ 15 ಜಿಲ್ಗೆಗಳಲ್ಲಿ ಭಾರಿ ಪ್ರವಾಹ ಸಂಭವಿಸಿದೆ.

ಶುಕ್ರವಾರ ಮಚ್ಚೆ ಸುರಿದ ಭಾರಿ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿದ್ದು, ಜಲಾಶಯಗಳಿಂದ ನಿರಂತರವಾಗಿ ನೀರು ಹೊರಗೆ ಹಾಕಲಾಗುತ್ತಿದೆ. ಬಿಹಾರದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು,  ಕಳೆದ ಕೇವಲ 24 ಗಂಟೆಗಳಲ್ಲಿಯೇ ಬರೊಬ್ಬರಿ 34 ಮಂದಿ ಸಾವಲನ್ನಪ್ಪಿದ್ದಾರೆ.

ಇನ್ನು ಬಿಹಾರದಲ್ಲಿ ಬೀಡು ಬಿಟ್ಟಿರುವ ಎನ್ ಡಿ ಆರ್ ಎಫ್ ಸಿಬ್ಬಂದಿ ಈ ವರೆಗೂ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದಾರೆ. ಅಂತೆಯೇ ಕಳೆದೊಂದು ವಾರದಿಂದ ಸುರಿಯುತ್ತಿರುವ  ಮಳೆಯಿಂದಾಗಿ ಈವರೆಗೂ 1.8 ಕೋಟಿ ಜನರ ಜೀವನದ ಮಲೆ ಹಾಗೂ 1,688 ಪಂಚಾಯಾತಿ ವ್ಯಾಪ್ತಿಯಲ್ಲಿನ ಹಳ್ಳಿಗಳು ನೆರೆ ಹಾವಳಿ ತುತ್ತಾಗಿದೆ.

ಇತ್ತೀಚೆಗಷ್ಟೇ ಸೇತುವೆ ಕುಸಿದು ಮೂವರ ನೀರು ಪಾಲದ ಬಿಹಾರದ ಅರಾರಿಯ ಪ್ರದೇಶವೊಂದರಲ್ಲೇ ಅತೀ ಹೆಚ್ಚು ಅಂದರೆ 30 ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ವೆಸ್ಟ್ ಚಂಪಾರಣ್ ಜಿಲ್ಲೆಯಲ್ಲಿ 23, ಸಿತಾಮಾಘಿ 13 ಮತ್ತು  ಸುಪಾಲ್, ಕೃಷ್ಣಾಗಂಜ್, ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ತಲಾ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದ್ದು, ಈ ವರೆಗೂ ಪ್ರವಾಹದಿಂದಾಗಿ ಸುಮಾರು 40 ಮಂದಿ ಸಾವನ್ನಪ್ಪಿದ್ದಾರೆ. ಬಚ್ರೇಚ್ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 10ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com