9ನೇ 'ಬ್ರಿಕ್ಸ್' ಸಮಾವೇಶ: ಚೀನಾ ಮಾಡಿದ್ದ 'ದ್ರೋಹ' ಮರೆಯದಿರಿ- ಪ್ರಧಾನಿ ಮೋದಿಗೆ ಕಾಂಗ್ರೆಸ್
9ನೇ ಬ್ರಿಕ್ಸ್ ಸಮಾವೇಶಕ್ಕೆ ದಿನಗಣನೆ ಆರಂಭವಾಗಿದ್ದು, ಚೀನಾಗೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರು, ಇತಿಹಾಸದುದ್ದಕ್ಕೂ ಭಾರತಕ್ಕೆ ಅವರು ಮಾಡಿದ್ದ ದ್ರೋಹವನ್ನು ಮರೆಯಬಾರದು ಎಂದು ಕಾಂಗ್ರೆಸ್...
ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಮತ್ತು ಪ್ರಧಾನಂತ್ರಿ ನರೇಂದ್ರ ಮೋದಿ
ನವದೆಹಲಿ: 9ನೇ ಬ್ರಿಕ್ಸ್ ಸಮಾವೇಶಕ್ಕೆ ದಿನಗಣನೆ ಆರಂಭವಾಗಿದ್ದು, ಚೀನಾಗೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರು, ಇತಿಹಾಸದುದ್ದಕ್ಕೂ ಭಾರತಕ್ಕೆ ಚೀನಾ ಮಾಡಿದ್ದ ದ್ರೋಹವನ್ನು ಮರೆಯಬಾರದು ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಎಲ್ ಪುಣ್ಯಾ ಅವರು, ಬ್ರಿಕ್ಸ್ ಸಮಾವೇಶ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾಗೆ ಭೇಟಿ ನೀಡುತ್ತಿರುವುದು ಪೂರ್ವ ನಿಯೋಜಿತವಾದದ್ದು. ಡೋಕ್ಲಾಮ್ ಬಿಕ್ಕಟ್ಟು 70 ದಿನಗಳಿಂದಲೂ ಇದೆ.
ಚೀನಾ ನಂಬಿಕೆಗೆ ಅರ್ಹವಲ್ಲದ ದೇಶ ಎಂಬುದನ್ನು ಭಾರತ ಸರ್ಕಾರ ಮನಗಾಣಬೇಕಿದೆ. ಇತಿಹಾಸದುದ್ದಕ್ಕೂ ಚೀನಾ ಭಾರತಕ್ಕೆ ದ್ರೋಹ ಮಾಡುತ್ತಲೇ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಬ್ರಿಕ್ಸ್' ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸೆ.3 ರಿಂದ 5ರವರೆಗೆ ಚೀನಾ ಯಾತ್ರೆ ಕೈಗೊಳ್ಳಲಿದ್ದಾರೆ.