ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವಂತೆ ಪ್ರಸ್ತುತ ಚೀನಾ ಸೇನೆ ಮೇಲೆ ನಿಗಾ ಇಟ್ಟಿರುವ ಸ್ಯಾಟಲೈಟ್ ಗಳಿಗೆ ಪರ್ಯಾಯವಾಗಿ ಈ ಡ್ರೋಣ್ ಕಾರ್ಯ ನಿರ್ವಹಿಸಲಿದ್ದು, ಬರೊಬ್ಬರಿ 65 ಸಾವಿರ ಅಡಿಗಳ ಮೇಲೆ ಹಾರಾಡಬಲ್ಲ ಸಾಮರ್ಥ್ಯವನ್ನು ಈ ಡ್ರೋಣ್ ಹೊಂದಿದೆ ಎನ್ನಲಾಗಿದೆ. ನೊಯ್ಡಾ ಮೂಲದ ನ್ಯೂ ಸ್ಪೇಸ್ ರೀಸರ್ಚ್ ಅಂಡ್ ಟೆಕ್ನಾಲಜಿ ಎಂಬ ಸ್ಟಾರ್ಟ್ ಅಪ್ ಸಂಸ್ಥೆ ಈ ಅತ್ಯಾಧುನಿಕ ಡ್ರೋಣ್ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಡ್ರೋಣ್ ನ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಿ ಹೆಚ್ಚು ಹೊತ್ತು ಹಾರಬಲ್ಲ ಸಾಮರ್ಥ್ಯವನ್ನು ಇದಕ್ಕೆ ನೀಡಲು ಸಂಶೋಧಕರು ನಿರ್ಧರಿಸಿದ್ದಾರೆ.