ಮದ್ಯಪಾನ ನಿಷೇಧದಿಂದ ಕೋಮು ಸೌಹಾರ್ಧ ಸಾಧ್ಯ ಎಂದು ಹೇಳಿರುವ ನಿತೀಶ್ ಕುಮಾರ್, ಮದ್ಯಪಾನವನ್ನು ಹಿಂದೂ, ಮುಸ್ಲಿಂ, ಸಿಖ್, ಜೈನ ಧರ್ಮಗಳು ವಿರೋಧಿಸುತ್ತವೆ. ಮದ್ಯಪಾನ ನಿಷೇಧದ ಮೂಲಕ ಎಲ್ಲರೂ ಎಲ್ಲ ಧರ್ಮಗಳನ್ನು ಗೌರವಿಸುತ್ತಾರೆ ಎಂದು ನಿತೀಶ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ದೇಶಾದ್ಯಂತ ಮದ್ಯಪಾನ ನಿಷೇಧಕ್ಕಾಗಿ ಜಾಗೃತಿ ಅಭಿಯಾನ ನಡೆಸುವಂತೆ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.