ತಮ್ಮ ಪುತ್ರಿ ಆಕಾಂಶಾ ಶರ್ಮಾ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ತಂದೆ ಶಿಬೇಂದ್ರ ಶರ್ಮಾ ಅವರು ಜನವರಿ 5ರಂದು ಬಂಕುರಾ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ಶುರು ಮಾಡಿದ ಬಂಕುರಾ ಪೊಲೀಸ್ ತಂಡ ಫೆಬ್ರವರಿ 1ರಂದು ಭೋಪಾಲ್ ತಲುಪಿತ್ತು. ಖಚಿತ ಸುಳಿವಿನ ಮೇಲೆ ಪೊಲೀಸರು ಭೋಪಾಲ್ ನ ಸಾಕೇತ್ ನಗರದ ನಿವಾಸಿಯಾಗಿರುವ ಉದಯನ್ ದಾಸ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದರು. ಆತನ ಮನೆಯನ್ನು ತೀವ್ರವಾಗಿ ಶೋಧಿಸಿದಾಗ ಆಕಾಂಶಾಳನ್ನು ಅಡುಗೆ ಕೋಣೆಯಲ್ಲಿ ಹೂಳಲ್ಪಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ.