ವಾಘಾ: ಜಲಗಡಿ ನಿಯಮ ಉಲ್ಲಂಘಿಸಿ ಪಾಕಿಸ್ತಾನದ ಜೈಲು ಸೇರಿದ್ದ 227 ಭಾರತೀಯ ಮೀನುಗಾರರ ಬಿಡುಗಡೆಯಾಗಿದ್ದು ನಿನ್ನೆ ಭಾರತ-ಪಾಕ್ ಗೆ ಸಂಪರ್ಕ ಕಲ್ಪಿಸುವ ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿಸಿದ್ದಾರೆ.
ಪಾಕಿಸ್ತಾನ ಪೊಲೀಸರು 227 ಭಾರತೀಯ ಮೀನುಗಾರರನ್ನು ಲಾಹೋರ್ ಗೆ ಕರೆತಂದು ಬಳಿಕ ವಾಘಾ ಗಡಿಯಲ್ಲಿ ಭಾರತದ ಸೇನೆಗೆ ಹಸ್ತಾಂತರಿಸಿದ್ದಾರೆ.
ಭಾರತೀಯ ಮೀನುಗಾರರ ಬಿಡುಗಡೆಯೊಂದಿಗೆ ಭಾರತದೊಂದಿಗೆ ಸೌಹಾರ್ದಯುತ ಸ್ನೇಹ ಬೆಳೆಸಲು ಪಾಕಿಸ್ತಾನ ತುಡಿಯುತ್ತಿದೆ ಎಂದು ಹೇಳಲಾಗುತ್ತಿದೆ.