ಶಿಮ್ಲಾದ ತನ್ನು ಗ್ರಾಮದಲ್ಲಿರುವ ಮರದ ಮನೆಗಳಿಗೆ ಬೆಂಕಿಯ ಧಗೆ ಹತ್ತಿಕೊಂಡು ಹೊತ್ತಿ ಉರಿಯಿತು. ಮಾನವರ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ ಮನೆಗಳು ಬೆಂಕಿಗೆ ಆಹುತಿಯಾಗಿರುವುದರಿಂದ 50ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ದನ ಕರುಗಳು ಕೂಡ ಬೆಂಕಿಗೆ ಸಿಲುಕಿ ಸತ್ತುಹೋಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ರೋಹನ್ ಠಾಕೂರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.