ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಈ ಎಚ್ಚರಿಕೆ ನೀಡಿದ್ದು, ಚೀನಾದ ಪ್ರದೇಶದಲ್ಲಿ ಭಾರತ ಅತಿಕ್ರಮ ಪ್ರವೇಶ ಮಾಡಿದೆ ಎಂದು ಚೀನಾ ಪತ್ರಿಕೆ ಆರೋಪಿಸಿದೆ. 1962 ಕ್ಕಿಂತ ಈಗಿನ ಭಾರತ ಭಿನ್ನವಾಗಿದೆ ಎಂದು ಜೇಟ್ಲಿ ಹೇಳಿದ ಬೆನ್ನಲ್ಲೇ ಚೀನಾ ಪತ್ರಿಕೆ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಭಾರತ ಗಡಿ ವಿಚಾರವಾಗಿ ಚೀನಾವನ್ನು ಪ್ರಚೋದಿಸಿದ್ದೇ ಆದರೆ 1962 ಕ್ಕಿಂತ ಹೆಚ್ಚು ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.