ಮೂವರು ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಮತ್ತೆ ದಾಳಿ ನಡೆಸಿದ್ದು, ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಮೂವರು ತಮಿಳುನಾಡು ಮೀನುಗಾರರನ್ನು ಭಾನುವಾರ ಬಂಧನಕ್ಕೊಳಪಡಿಸಿದೆ...
ರಾಮೇಶ್ವರ: ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಮತ್ತೆ ದಾಳಿ ನಡೆಸಿದ್ದು, ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಮೂವರು ತಮಿಳುನಾಡು ಮೀನುಗಾರರನ್ನು ಭಾನುವಾರ ಬಂಧನಕ್ಕೊಳಪಡಿಸಿದೆ.
ಪುಡುಕೊಟ್ಟೈ ನ ಜಗದಪಟ್ಟಿನಾಂ ಮೂಲದವರಾಗಿರುವ ಮೂವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಕರೈನಗರ್ ಬಳಿ ಬಂಧನಕ್ಕೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಮೂವರು ಮೀನುಗಾರರನ್ನು ಕಂಗೆಸನ್ಥುರೈ ಬಂದರಿಗೆ ಕರೆದುಕೊಂಡು ಹೋಗಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ತಿಂಗಳಿನಲ್ಲಿ ಶ್ರೀಲಂಕಾ ಪಡೆ ಭಾರತೀಯ ಮೀನುಗಾರರ ಮೇಲೆ ಎರಡು ಬಾರಿ ದಾಳಿ ನಡೆಸಿದೆ. ಜುಲೈ.6 ರಂದು ಶ್ರೀಲಂಕಾ ನೌಕಾಪಡೆ 8 ಮಂದಿ ಮೀನುಗಾರರನ್ನು ಬಂಧನಕ್ಕೊಳಪಡಿಸಿತ್ತು. ಅಲ್ಲದೆ, 2 ಬೋಟುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಕಳೆದ ತಿಂಗಳೂ ಕೂಡ 50ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿತ್ತು.