ಶ್ರೀಲಂಕಾ ನೌಕಾಪಡೆಯಿಂದ 7 ಭಾರತೀಯ ಮೀನುಗಾರರ ಬಂಧನ

ಜಲಗಡಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ 7 ಭಾರತೀಯ ಮೀನುಗಾರರನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನಾಗಪಟ್ಟಣಂ: ಜಲಗಡಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ 7 ಭಾರತೀಯ ಮೀನುಗಾರರನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 
ಪಾಲ್ಕ್ ಸ್ಟ್ರೇಟ್ ಪ್ರದೇಶದಲ್ಲಿರುವ ನೆಡುಂಥೆವು ದ್ವೀಪದ ಬಳಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿರುವ ಶ್ರೀಲಂಕಾ ನೌಕಾಪಡೆ ತಮಿಳುನಾಡಿನ 7 ಮೀನುಗಾರರನ್ನು ಬಂಧನಕ್ಕೊಳಪಡಿಸಿದ್ದು, ಎರಡು ಬೋಟುಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. 
ಬಂಧನಕ್ಕೊಳಗಾಗಿರುವ ಮೀನುಗಾರರನ್ನು ವಿಚಾರಣೆಗಾಗಿ ಶ್ರೀಲಂಕಾಗ ಜಾಫ್ಫ್ನಾ ಜಿಲ್ಲೆಯಲ್ಲಿರುವ ಕಂಕೆಸನ್ಥುರೈ ಬಂದರಿಗೆ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ. 
ಜುಲೈ.9 ರಂದು ಮೂವರು ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಿದ್ದ ಶ್ರೀಲಂಕಾ ನೌಕಾಪಡೆ, 1 ದೋಣಿಯನ್ನು ವಶಕ್ಕೆ ಪಡೆದುಕೊಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com