ಕಾಶ್ಮೀರದ ಲಡಾಕ್ ನಲ್ಲಿನ ಅಕ್ಸೈ ಚೀನ್ ಅನ್ನು ಚೀನಾ ಆಕ್ರಮಿಸಿಕೊಂಡಿದೆ. ಇದು ನಮಗೆ ಗೊತ್ತು. ಆದರೆ ಆ ಪ್ರದೇಶವನ್ನು ಚೀನಾದಿಂದ ಹಿಂಪಡೆಯಲು ಶಕ್ತಿ ಕೊರತೆ ಇದೆ. ಚೀನಾದ ಸ್ನೇಹ ಸಂಪಾದಿಸುವ ಮೂಲಕ ನಾವು ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಿಕೊಳ್ಳಬಹುದೇ ಹೊರತು ಯುದ್ಧದಿಂದಲ್ಲ ಎಂದು ಫಾರೂಕ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.