ಭಾರತೀಯ ಸೇನೆಯಿಂದ ಪೃಥ್ವಿ-2 ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ಸ್ವದೇಶಿ ನಿರ್ಮಿತ, ಅಣುಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಪೃಥ್ವಿ-೨ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒರಿಸ್ಸಾದ ಚಂಡಿಪುರ್ ನಿಂದ ಭಾರತೀಯ...
ಪೃಥ್ವಿ 2
ಪೃಥ್ವಿ 2
ಭುವನೇಶ್ವರ: ಸ್ವದೇಶಿ ನಿರ್ಮಿತ, ಅಣುಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಪೃಥ್ವಿ-೨ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒರಿಸ್ಸಾದ ಚಂಡಿಪುರ್ ನಿಂದ ಭಾರತೀಯ ಸೇನೆ ಯಶಸ್ವಿಯಾಗಿ ಪರೀಕ್ಷಿಸಿದೆ.
9 ಮೀಟರ್ ಎತ್ತರ, 1 ಮೀಟರ್ ದಪ್ಪದ ಹಾಗೂ 4.6 ಟನ್ ತೂಕದ ಮಧ್ಯಮ ವ್ಯಾಪ್ತಿಯ ನೆಲದಿಂದ ನೆಲಕ್ಕೆ ಜಿಗಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೇನೆ ಸುಮಾರು ಬೆಳಗ್ಗೆ 9.50 ಕ್ಕೆ ಯಶಸ್ವಿಯಾಗಿ ಪರೀಕ್ಷಿಸಿದೆ. 
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ತಯಾರಿಸಿರುವ ಪೃಥ್ವಿ 2 ಕ್ಷಿಪಣಿ 350 ಕಿಮಿ ದೂರದ ಗುರಿಗೆ ಹೊಡೆಯುವ ಶಕ್ತಿ ಹೊಂದಿದ್ದು ಕ್ಷಿಪಣಿಗಳು 500 ರಿಂದ 1000 ಕೆಜಿ ಭಾರದ ಶಸ್ತ್ರಾಸ್ತ್ರಗಳನ್ನು ಹೊರಬಲ್ಲವಾಗಿವೆ. 
ಈ ಸಂಪೂರ್ಣ ಚಟುವಟಿಕೆಗಳನ್ನು ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ನಡೆಸಿದ್ದು, ಡಿ ಆರ್ ಡಿ ಒ ಮೇಲುಸ್ತುವಾರಿಯಲ್ಲಿ ಇದು ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com