ಪೊಲೀಸರಿಂದ ಇಂದ್ರಾಣಿ ಮುಖರ್ಜಿ ಮೇಲೆ ಹಲ್ಲೆ, ಸಹಖೈದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ

Published On :
ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿಯೊಂದಿಗೆ ಇದ್ದ ಸಹಖೈದಿ ಮಹಿಳೆ ಮೇಲೆ ಪೊಲೀಸರೇ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ ಎಂದು ಇಂದ್ರಾಣಿ ಪರ ವಕೀಲರು ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಸಾಕ್ಷಿಯಾಗಿದ್ದ ತನ್ನ ಕಕ್ಷಿದಾರೆ ಇಂದ್ರಾಣಿ ಸತ್ಯ ಬಾಯಿಬಿಡಬಾರದು ಎಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಮಹಿಳಾ ಖೈದಿ ಸಾವಿಗೆ ತನ್ನ ಕಕ್ಷಿದಾರೆ ಇಂದ್ರಾಣಿ ಮುಖರ್ಜಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಈ ಸಂಬಂಧ ಕೋರ್ಟ್ ನಲ್ಲಿ ಹೇಳಿಕೆ ನೀಡಲು ಬಯಸಿದ್ದಾರೆ ಎಂದು ಇಂದ್ರಾಣಿ ಪರ ವಕೀಲ ಗುಂಜನ್ ಮಂಗಲಾ ಅವರು ಹೇಳಿದ್ದಾರೆ.
ಸಹ ಖೈದಿ ಸಾವಿಗೆ ಸಂಬಂಧಿಸಿದಂತೆ ನನ್ನ ಬಳಿ ಮಹತ್ವ ಮಾಹಿತಿ ಇದ್ದು, ಅದನ್ನು ಹೇಳಬಾರದು ಎಂದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಾಯಿ ಬಿಟ್ಟರೆ ತನ್ನ ಮೇಲು ಲೈಂಗಿಕ ದೌರ್ಜನ್ಯ ಎಸಗುವುದಾಗಿ ಎಚ್ಚರಿಸಿದ್ದಾರೆ ಎಂದು 44 ವರ್ಷದ ಇಂದ್ರಾಣಿ ಇಂದು ತಮ್ಮ ವಕೀಲರ ಮೂಲಕ ಕೋರ್ಟ್ ತಿಳಿಸಿದ್ದು, ಈ ಸಂಬಂಧ ನಾಳೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಇಂದ್ರಾಣಿಗೆ ಕೋರ್ಟ್ ಸೂಚಿಸಿದೆ.
ಜೈಲಿನಲ್ಲಿ ಮೃತಪಟ್ಟ ಮಹಿಳಾ ಖೈದಿಯ ಗುಪ್ತಾಂಗಕ್ಕೆ ಲಾಠಿ ಹಾಕಿ ಕಿರುಕುಳ ನೀಡಲಾಗಿದೆ ಎಂದು ಇಂದ್ರಾಣಿ ಆರೋಪಿಸಿದ್ದಾಳೆ. ಅಲ್ಲದೆ ಈ ಸಂಬಂಧ ಮತ್ತೊಬ್ಬ ಸಹ ಖೈದಿ ನೀಡಿರುವ ದೂರಿನಲ್ಲೂ ಮೃತ ಮಹಿಳಾ ಖೈದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಕಳೆದ ಶನಿವಾರ ಮುಂಬೈನ ಬೈಕುಲಾ ಜೈಲಿನಲ್ಲಿ ನಡೆದ ಗಲಭೆಯಲ್ಲಿ ಇಂದ್ರಾಣಿ ಸಹಕೈದಿ ಮಂಜುಳಾ ಮೃತಪಟ್ಟಿದ್ದು, ಮಹಿಳಾ ಕೈದಿ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆ ಆರೋಪದ ಮೇಲೆ ಜೈಲು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಗಲಭೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಮತ್ತು ಇತರ ಮಹಿಳಾ ಸಹ ಖೈದಿಗಳ ಮೇಲೆ ಕೇಸು ದಾಖಲಿಸಲಾಗಿದೆ.
ಖೈದಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಆರು ಅಧಿಕಾರಿಗಳನ್ನು ಸಹ ಸೇವೆಯಿಂದ ಅಮಾನತುಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


