ನೊಯ್ಡಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಂಸದ ಹಾಗೂ ಐಎಫ್ಎಸ್ ಅಧಿಕಾರಿ ಸೈಯದ್ ಶಹಾಬುದ್ದೀನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ಮಜ್ಲಿಸ್ ಮುಶಾವರತ್ ಮಾಜಿ ಅಧ್ಯಕ್ಷರಾಗಿದ್ದ ಶಬಾಹುದ್ದೀನ್ ಅವರು ಇಂದು ಬೆಳಗ್ಗೆ 6.33ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಹಾಗೂ ಅಖಿಲ ಭಾರತ ಮುಸ್ಲಿಂ ಮಜ್ಲಿಸ್ ಮುಶಾವರತ್ ಹಾಲಿ ಅಧ್ಯಕ್ಷ ನವೈದ್ ಹಮಿದ್ ಅವರು ಹೇಳಿದ್ದಾರೆ.
ಶಹಾಬುದ್ದೀನ್ ಅವರನ್ನು ನೊಯ್ಡಾದ ಜಯ್ಪೀ ಆಸ್ಪತ್ರೆಗೆ ದಾಖಲಿಸಲಾಗಿತ್ತು.