ಚೀನಾ ಗಡಿಯಲ್ಲಿ ಐಎಎಫ್ ಸುಖೋಯ್-30 ಯುದ್ಧ ವಿಮಾನ ನಾಪತ್ತೆ

ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್-30 ಯುದ್ಧ ವಿಮಾನ ಚೀನಾ ಗಡಿ ಬಳಿ ನಾಪತ್ತೆಯಾಗಿದೆ...
ಸುಖೋಯ್ 30
ಸುಖೋಯ್ 30
ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್-30 ಯುದ್ಧ ವಿಮಾನ ಚೀನಾ ಗಡಿ ಬಳಿ ನಾಪತ್ತೆಯಾಗಿದೆ. 
ಅಸ್ಸಾಂನ ತೇಜ್ ಪುರದಿಂದ ಹಾರಾಟ ಪ್ರಾರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ತೇಜ್ ಪುರದಿಂದ 60 ಕಿ.ಮೀ ದೂರ ತೆರಳುತ್ತಿದ್ದಂತೆ ರೆಡಾರ್ ಸಂಪರ್ಕ ಕಡಿತಗೊಂಡಿದೆ. ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದರು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. 
ಸುಖೋಯ್ ಯುದ್ಧ ವಿಮಾನ ನಾಪತ್ತೆ ಹಿನ್ನೆಲೆ ವಿಮಾನ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com