ಭೇಟಿ ಕುರಿತಂತೆ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ಈ ಹಿನ್ನಲೆಯಲ್ಲಿ ಭೇಟಿ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಈ ಭೇಟಿಯ ಬಗ್ಗೆ ನೀವು ಏನೇನೋ ಕಲ್ಪಿಸಿಕೊಳ್ಳಬೇಡಿ. ಇದೊಂದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ನಡುವಿನ ಸಾಮಾನ್ಯ ಭೇಟಿಯಷ್ಟೇ. ಜೆಡಿಯು ಪಕ್ಷದ ಅಧ್ಯಕ್ಷನಾಗಿ ನಾನು ಮೋದಿಯವರನ್ನು ಭೇಟಿಯಾಗಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಭೇಟಿಯಾಗಿದ್ದೇನೆ. ಇದು ರಾಜಕೀಯ ಸಭೆಯಲ್ಲ ಎಂದು ಹೇಳಿದ್ದಾರೆ.