ರಾಜಸ್ತಾನದ ನಗೌರ್ ಜಿಲ್ಲೆಯ ಕಾಳಿನಗರ ಬಸ್ನಿ ಗ್ರಾಮದ ನಿವಾಸಿಗಳಾಗಿರುವ 8 ಮಂದಿ ಯುವಕರು ಕಾರಿನಲ್ಲಿ ರಾಮಜನ್ಮಭೂಮಿಗೆ ಬರುತ್ತಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಗಳು ಕಾರನ್ನು ತಡೆದಿದ್ದಾರೆ. ಈ ವೇಳೆ ಯುವಕರು ನ.15 ರಂದು ಅಯೋಧ್ಯೆಗೆ ಬಂದಿದ್ದು, ನಾವು ಯಾತ್ರಾರ್ಥಿಗಳು ಎಂದು ಹೇಳಿದ್ದಾರೆ. ಅಲ್ಲದೆ, ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಕಿಚೌಚಾಗೆ ಶರೀಫ್'ಗೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.