ಹರ್ಯಾಣದ ಬಿಜೆಪಿ ಘಟಕದ ಮುಖ್ಯಸ್ಥ ಅನಿಲ್ ಜೈನ್ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತಲೆ ಕಡಿಯುವ ಸಂಸ್ಕೃತಿ ಬಿಜೆಪಿ ಪಕ್ಷದ್ದಲ್ಲ... ಪದ್ಮಾವತಿ ಚಿತ್ರ ಸಂಬಂಧ ಯಾವುದೇ ಸಮಸ್ಯೆಗಳಿರಬಹುದು. ಆದರೆ ನಟಿಯೊಬ್ಬರ ತಲೆ ಕಡಿಯುವ ಹೇಳಿಕೆ ನೀಡುವುದು ಅಕ್ಷಮ್ಯ. ಹೀಗಾಗಿ ಬಿಜೆಪಿ ನಾಯಕ ಸೂರಜ್ ಪಾಲ್ ಅಮು, ಕೂಡಲೇ ಸಾರ್ವಜನಿಕವಾಗಿ ನಟಿಯ ಕ್ಷಮೆ ಯಾಚಿಸಬೇಕು ಎಂದು ಸೂಚಿಸುತ್ತೇವೆ ಎಂದು ಹೇಳಿದರು.