ಆರ್'ಎಸ್ಎಸ್ ಮಹಿಳೆಯರ ಕುರಿತು ರಾಹುಲ್ ಹೇಳಿಕೆಗೆ ಅಕ್ರೋಶ: ಕ್ಷಮೆಗೆ ಆಗ್ರಹ

ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮಹಿಳೆಯರ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಗೆ ಇದೀಗ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದು, ಹೇಳಿಕೆ ಕುರಿತಂತೆ ರಾಹುಲ್ ಕೂಡಲೇ ಕ್ಷಮೆಯಾಚಿಸಬೇಕೆಂದು ಆರ್'ಎಸ್ಎಸ್...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on: 
ವಡೋದರ: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮಹಿಳೆಯರ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಗೆ ಇದೀಗ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದು, ಹೇಳಿಕೆ ಕುರಿತಂತೆ ರಾಹುಲ್ ಕೂಡಲೇ ಕ್ಷಮೆಯಾಚಿಸಬೇಕೆಂದು ಆರ್'ಎಸ್ಎಸ್ ಬುಧವಾರ ಆಗ್ರಹಿಸಿದೆ
ರಾಹುಲ್ ಹೇಳಿಕೆ ಕುರಿತೆತ ಪ್ರತಿಕ್ರಯೆ ನೀಡಿರುವ ಗುಜರಾತ್ ರಾಜ್ಯ ಘಟಕದ ಆರ್'ಎಸ್ಎಸ್ ನಾಯಕ ವಿಜಯ್ ಥಕರ್ ಅವರು, ಹೇಳಿಕೆ ನೀಡುವುದಕ್ಕೂ ಮುನ್ನ ರಾಹುಲ್ ಅವರು ನಮ್ಮ ಸಂಘಟನೆಯ ಚಟುವಟಿಕೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಆರ್'ಎಸ್ಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ರಾಹುಲ್ ಗಾಂಧಿಯವರಿಗೆ ತಿಳಿಸಿದಿಲ್ಲ. ಸಂಘಟನೆಯ ಮಹಿಳೆಯರ ಬಗ್ಗೆ ಹೇಳಿಕೆ ನೀಡಿರುವ ರಾಹುಲ್ ಅವರು ಮೊದಲು ಕ್ಷಮೆಯಾಚಿಸಬೇಕಿದೆ. ಆರ್'ಎಸ್ಎಸ್ ಜೊತೆಗೆ ರಾಷ್ಟ್ರ ಸೇವಿಕಾ ಸಮಿತಿ ಕೂಡ ಇದೆ. 1936ರಿಂದಲೂ ರಾಷ್ಟ್ರ ಕಟ್ಟಲು ಎರಡೂ ಸಂಘಟನೆಗಳು ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. 
ಸಂಘಟನೆ ತನ್ನು ಗುರಿ ಮುಟ್ಟಲು ಆರ್'ಎಸ್ಎಸ್ ನಲ್ಲಿರುವ ಮಹಿಳಾ ಸದಸ್ಯರು ನೇರವಾಗಿ ಹಾಗೂ ಪರೋಕ್ಷವಾಗಿ ಸಹಾಯವನ್ನು ಮಾಡುತ್ತಿದೆ. ಆರ್'ಎಸ್ಎಸ್ ಚಟುವಟಿಕೆಗಳಲ್ಲಿ ಮಹಿಳೆಯರು ಪಾತ್ರ ಸದಾಕಾಲ ಇರುತ್ತದೆ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ವಡೋದರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಆರ್'ಎಸ್ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ಚಡ್ಡಿ ಧರಿಸಿದ ಮಹಿಳೆಯರನ್ನು ನೋಡಿದ್ದೀರಾ? ನಾನಂತೂ ನೋಡಿಲ್ಲ. ಬಿಜೆಪಿಯವರ ಮಾತೃ ಸಂಘಟನೆ ಆರ್'ಎಸ್ಎಸ್ ಆಗಿದೆ. ಅದರಲ್ಲಿ ಎಷ್ಟು ಮಹಿಳೆಯರನ್ನು ನೀವು ನೋಡಿದ್ದೀರಾ? ನಾನಂತೂ ನೋಡಿಲ್ಲ. ಮಹಿಳೆಯರು ಸುಮ್ಮನಿದ್ದರೆ ಎಲ್ಲವೂ ಸರಿಯಿರುತ್ತದೆ. ಮಹಿಳೆಯರು ಬಾಯಿ ಬಿಟ್ಟರೆ ಬಾಯಿ ಮುಚ್ಚಿಸಲು ನೋಡುತ್ತಾರೆ. ಆದರೆ, ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com