ದೇಶ ಕಾಯುವ ಯೋಧರಿಗೆ ಶುಭ ಕೋರಿ ವಿಶೇಷ ವಿಡಿಯೋ ಸಂದೇಶ ಕಳುಹಿಸಿದ ಲತಾ ಮಂಗೇಶ್ಕರ್

ಪ್ರಾಣದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿರುವ ಗಾಯಕಿ ಲತಾ ಮಂಗೇಶ್ಕರ್ ಅವರು ಸೆಲ್ಯೂಟ್ ಹೊಡೆದು ವಿಡಿಯೋ ಸಂದೇಶವೊಂದನ್ನು ಶುಕ್ರವಾರ ಕಳುಹಿಸಿದ್ದಾರೆ...
ಗಾಯಕಿ ಲತಾ ಮಂಗೇಶ್ಕರ್
ಗಾಯಕಿ ಲತಾ ಮಂಗೇಶ್ಕರ್

ಮುಂಬೈ: ಪ್ರಾಣದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿರುವ ಗಾಯಕಿ ಲತಾ ಮಂಗೇಶ್ಕರ್ ಅವರು ಸೆಲ್ಯೂಟ್ ಹೊಡೆದು ವಿಡಿಯೋ ಸಂದೇಶವೊಂದನ್ನು ಶುಕ್ರವಾರ ಕಳುಹಿಸಿದ್ದಾರೆ. 


ಕಳೆದ ರಾತ್ರಿ ಲತಾ ಮಂಗೇಶ್ಕರ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಭಾರತೀಯ ಯೋಧರಿಗೆ ಶುಭಶಯಗಳನ್ನು ಕೋರಿದ್ದಾರೆ. 

ಭಾರತೀಯ ಯೋಧರಿಗೆ ನಾನು ಸೆಲ್ಯೂಟ್ ಹೊಡೆಯುತ್ತಿದ್ದೇನೆ. ನಾನು ನಿಮ್ಮ ಸಹೋದರಿಯಾಗಿದ್ದು, ನಿಮ್ಮನ್ನು ಗೌರವಿಸುತ್ತೇನೆ. ಭಾರತ ಇರುವುದೇ ಯೋಧರಿಂದ, ನಾವಿರುವುದೇ ಭಾರತದಿಂದ ಎಂದು ಹೇಳಿಕೊಂಡಿದ್ದಾರೆ. 

88 ವರ್ಷದ ಹಿರಿಯ ಗಾಯಕಿ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಅಲ್ಲದೆ, ಭಾರತೀಯ ಯೋಧರಿಗಾಗಿ ಯಾವುದೇ ವಿಧದ ಸಹಾಯ ಮಾಡಲು ಸದಾ ಸಿದ್ಧ ಎಂಬುದನ್ನು ಹಲವಾರು ಬಾರಿ ಸಾಬೀತು ಪಡಿಸಿದ್ದಾರೆ. 

ಕಳೆದ ವರ್ಷ ಲತಾ ಮಂಗೇಶ್ಕರ್ ಅವರು ತಮ್ಮ ಹುಟ್ಟಿದ ದಿನವನ್ನು ಯೋಧರಿಗೆ ಸಮರ್ಪಿಸುವಂತೆ ಅಭಿಮಾನಿಗಳಲ್ಲಿ ಕೋರಿದ್ದರು. ಜೊತೆಗೆ ಭಾರತೀಯ ಯೋಧರ ಕಲ್ಯಾಣ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com