ಆರ್ ಜೆಡಿಯೊಂದಿಗಿನ ಮೈತ್ರಿ ತೊರೆಯಲು 19 ಕಾಂಗ್ರೆಸ್ ಶಾಸಕರಿಂದ ರಾಹುಲ್ ಗೆ ಒತ್ತಡ
ಬಿಹಾರದಲ್ಲಿ ಮತ್ತೊಂದು ರಾಜಕೀಯ ಹೈಡ್ರಾಮ ನಡೆಯುವ ಸಾಧ್ಯತೆ ಇದ್ದು, ಆರ್ ಜೆಡಿಯೊಂದಿಗಿನ ಮೈತ್ರಿಯನ್ನು ತೊರೆಯುವಂತೆ ಕಾಂಗ್ರೆಸ್ ನ 19 ಶಾಸಕರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಒತ್ತಡ...
ನವದೆಹಲಿ: ಬಿಹಾರದಲ್ಲಿ ಮತ್ತೊಂದು ರಾಜಕೀಯ ಹೈಡ್ರಾಮ ನಡೆಯುವ ಸಾಧ್ಯತೆ ಇದ್ದು, ಆರ್ ಜೆಡಿಯೊಂದಿಗಿನ ಮೈತ್ರಿಯನ್ನು ತೊರೆಯುವಂತೆ ಕಾಂಗ್ರೆಸ್ ನ 19 ಶಾಸಕರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಒತ್ತಡ ಹೇರುತ್ತಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಕಾಂಗ್ರೆಸ್ ನ ಶಾಸಕರು ಆರ್ ಜೆಡಿಯೊಂದಿಗಿನ ಮೈತ್ರಿಯನ್ನು ತಾತ್ಕಾಲಿಕವಾಗಿಯಾದರೂ ಮುಂದೂಡಬೇಕೆಂದು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.
ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಎಂದಿಗೂ ಕಾಂಗ್ರೆಸ್ ಗೆ ನಿಷ್ಠವಾಗಿಲ್ಲ ಎಂದು ಸಭೆಯೊಂದರಲ್ಲಿ ರಾಹುಲ್ ಗಾಂಧಿಗೆ ಬಿಹಾರ ಕಾಂಗ್ರೆಸ್ ನ ಶಾಸಕರು ಹೇಳಿದ್ದಾರೆ.
ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಮೇಲ್ವರ್ಗದವರನ್ನು ಕಡೆಗಣಿಸಿ ಮುಸ್ಲಿಂ-ಯಾದವರಿರುವ ಕ್ಷೇತ್ರಗಳನ್ನು ತಾವು ಇಟ್ಟುಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಹಿನ್ನಡೆಯುಂಟಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ.