ಛತ್ತೀಸ್ಗಢ: ಪ್ರಯಾಣಿಕರ ಬಸ್'ಗೆ ಬೆಂಕಿ ಹಚ್ಚಿದ ನಕ್ಸಲರು

ಪ್ರಯಾಣಿಕರು ತೆರಳುತ್ತಿದ್ದ ಬಸ್ ವೊಂದರ ಮೇಲೆ ದಾಳಿ ಮಾಡಿರುವ ನಕ್ಸಲರ ಗುಂಪು ಬಸ್'ಗೆ ಬೆಂಕಿ ಹಚ್ಚಿರುವ ಘಟನೆಯೊಂದು ಛತ್ತೀಸ್ಗಢದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬಿಜಾಪುರ (ಛತ್ತೀಸ್ಗಢ): ಪ್ರಯಾಣಿಕರು ತೆರಳುತ್ತಿದ್ದ ಬಸ್ ವೊಂದರ ಮೇಲೆ ದಾಳಿ ಮಾಡಿರುವ ನಕ್ಸಲರ ಗುಂಪು ಬಸ್'ಗೆ ಬೆಂಕಿ ಹಚ್ಚಿರುವ ಘಟನೆಯೊಂದು ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. 
ನಿನ್ನೆ ಸಂಜೆ 5.15ರ ಸುಮಾರಿಗೆ ಬರೇಗುಡದಿಂದ ಜಗದಲ್ಪುರಕ್ಕೆ ಬಸ್ ವೊಂದು ತೆರಳುತ್ತಿತ್ತು. ಬಸ್ ಅರಣ್ಯ ಪ್ರದೇಶದತ್ತ ಬರುತ್ತಿದ್ದಂತೆಯೇ ನಾಗರೀಕರ ವೇಷ ಧರಿಸಿ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದ 10-15 ನಕ್ಸಲರ ಗುಂಪೊಂದು ಬಸ್ಸನ್ನು ತಡೆದಿದೆ. 
ಬಳಿಕ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಬಸ್ ನ ಡೀಸೆಲ್ ಟ್ಯಾಂಕ್ ಗೆ ಬೆಂಕಿ ಹಚ್ಚಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com