ಕಳೆದ ವರ್ಷ ನಡೆದ ಸರ್ಜಿಕಲ್ ಸ್ಟ್ರೈಕ್ ದಾಳಿ ಭಾರತ ಪಾಕಿಸ್ತಾನ ಹಾಗೂ ವಿಶ್ವ ಸಮುದಾಯಕ್ಕೆ ಸ್ಪಷ್ಟ ಸಂದೇಶವಾಗಿದ್ದು, ದೇಶದ ವಿರುದ್ಧ ಯಾವುದೇ ವಿದ್ರೋಹಕ ಚಟುವಟಿಕೆಗಳು ನಡೆದರೆ ಅದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೇನೆ ಕಾರ್ಯಾಚರಣೆ ನಡೆಸಿಯೇ ತೀರುತ್ತದೆ. ಎಲ್ ಒಸಿಯಲ್ಲಿ ಭಾರತ ಅಗತ್ಯ ಬಿದ್ದಾಗಲೆಲ್ಲಾ ಕಾರ್ಯಾಚರಣೆ ನಡೆಸುತ್ತದೆ ಎಂದು ಸೇನೆ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದೆ.