ಅಮೃತಸರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್ ಅವರು, ''ಜಾಗತಿಕ ಮಟ್ಟದಲ್ಲಿ ಪ್ರವಾಹ, ಮತ್ತು ಚಂಡಮಾರುತದಿಂದಾಗಿ ಇಂಧನ ಉತ್ಪಾದನೆ ಶೇ.13ರಷ್ಟು ಕುಸಿದಿತ್ತು. ಹೀಗಾಗಿ ಕಚ್ಚಾ ತೈಲದ ದರ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಆದರೆ ಮುಂದಿನ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಲಿದ್ದು, ದರ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.
ಪೆಟ್ರೋಲ್ ಡೀಸೆಲ್ ಗೂ ಜಿಎಸ್ ಟಿ ಜಾರಿಯಾದರೆ ತೈಲ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ''ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ದರಗಳು ಬಂದರೆ ಗ್ರಾಹಕರಿಗೆ ಅನುಕೂಲವಾಗಲಿದೆ. ದರಗಳಲ್ಲಿ ಕಡಿತ ಉಂಟಾಗಲಿದೆ'' ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದ "ನಿತ್ಯ ಇಂಧನ ದರ ಪರಿಷ್ಕರಣೆ" ಪದ್ಧತಿ ಜಾರಿ ಬಳಿಕ ಪೆಟ್ರೋಲ್, ಡೀಸೆಲ್ ದರಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.