ಆಸ್ಟ್ರೇಲಿಯಾ: ಸಿಖ್ ಬಾಲಕನಿಗೆ ಪೇಟಾ ಧರಿಸುವ ಹಕ್ಕಿನ ಪರವಾಗಿ ನ್ಯಾಯಾಲಯದ ಆದೇಶ

ಪೇಟಾ ಧರಿಸುವುದಕ್ಕೆ ಅಡ್ಡಿ ಉಂಟು ಮಾಡಿದ್ದ ಆಸ್ಟ್ರೇಲಿಯಾದಲ್ಲಿನ ಕ್ರಿಶ್ಚಿಯನ್ ಶಾಲೆಯ ವಿರುದ್ಧ ಸಿಖ್ ಕುಟುಂಬವೊಂದು ಪ್ರಕರಣವನ್ನು ಗೆದ್ದಿದೆ.
ಸಿಖ್ ಕುಟುಂಬ
ಸಿಖ್ ಕುಟುಂಬ
ಮೆಲ್ಬೋರ್ನ್: ಪೇಟಾ ಧರಿಸುವುದಕ್ಕೆ ಅಡ್ಡಿ ಉಂಟು ಮಾಡಿದ್ದ ಆಸ್ಟ್ರೇಲಿಯಾದಲ್ಲಿನ ಕ್ರಿಶ್ಚಿಯನ್ ಶಾಲೆಯ ವಿರುದ್ಧ ಸಿಖ್ ಕುಟುಂಬವೊಂದು ಪ್ರಕರಣವನ್ನು ಗೆದ್ದಿದೆ. 
ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಸಿಖ್ ಕುಟುಂಬದ 5 ವರ್ಷದ ಬಾಲಕನಿಗೆ ಪೇಟಾ ಧರಿಸಿ ಶಾಲೆಗೆ ಬರಲು ಅಲ್ಲಿನ ಕ್ರಿಶ್ಚಿಯನ್ ಶಾಲೆ ಸಮವಸ್ತ್ರದ ಕಾರಣ ನೀಡಿ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಿಖ್ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತ್ತು. 
ತಮ್ಮ ಮಗನಿಗೆ ಸಿಖ್ ಸಾಂಪ್ರದಾಯಿಕ ಪೇಟಾ ಧರಿಸಲು ಅನುಮತಿ ನಿರಾಕರಿಸುವ ಮೂಲಕ ಶಾಲೆ ಸಮಾನತೆಯ ಕಾಯ್ದೆಯನ್ನು ಉಲ್ಲಂಘನೆ ಮಾಡಿತ್ತು ಸಗರ್ದೀಪ್ ಸಿಂಗ್ ಅರೋರಾ ಹಾಗೂ ಅವರ ಪತ್ನಿ ಅನುರೀತ್ ಆರೋಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com