ಐಪಿಎಲ್ ಪಂದ್ಯದ ವೇಳೆ ಹಿಂಸಾಚಾರ ಪ್ರಕರಣ; ಸಮಸ್ಯೆಗೆ ಹಿಂಸೆ ಉತ್ತರವಲ್ಲ ಎಂದ ರಜನಿಕಾಂತ್

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಐಪಿಎಲ್ ವಿರೋಧಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವುದನ್ನು ಸೂಪರ್ ಸ್ಚಾರ್ ಮತ್ತು ಹಾಲಿ ತಮಿಳುನಾಡು ರಾಜಕಾರಣಿ ರಜನಿಕಾಂತ್ ತೀವ್ರ ಖಂಡಿಸಿದ್ದಾರೆ.
ನಟ ರಜನಿಕಾಂತ್
ನಟ ರಜನಿಕಾಂತ್
Updated on: 
ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಐಪಿಎಲ್ ವಿರೋಧಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವುದನ್ನು ಸೂಪರ್ ಸ್ಚಾರ್ ಮತ್ತು ಹಾಲಿ ತಮಿಳುನಾಡು ರಾಜಕಾರಣಿ ರಜನಿಕಾಂತ್ ತೀವ್ರ ಖಂಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ರಜನಿಕಾಂತ್ ನಮ್ಮ ಸಮಸ್ಯೆಗೆ ಹಿಂಸೆ ಉತ್ತರವಲ್ಲ. ನಮ್ಮ ಪ್ರತಿಭಟನೆ ಏನಿದ್ದರೂ ಶಾಂತವಾಗಿರಬೇಕು ಎಂದು ಹೇಳಿದ್ದಾರೆ. ಅಂತೆಯೇ ಪೊಲೀಸರ ಮೇಲಿನ ಹಲ್ಲೆಯನ್ನು ಕೂಡ ಖಂಡಿಸಿರುವ ರಜನಿಕಾಂತ್, ಇಂತಹ ಕಿಡಿಗೇಡಿ ಕೃತ್ಯಗಳನ್ನು ಕೂಡಲೇ ನಿಯಂತ್ರಿಸಬೇಕಿದೆ. ಇಂತಹ ಬೆಳವಣಿಗೆ ದೇಶಕ್ಕೇ ಮಾರಕ. ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಜನಿಕಾಂತ್ ಆಗ್ರಹಿಸಿದ್ದಾರೆ.
ಇನ್ನು ತಮ್ಮ ಟ್ವೀಟ್ ನೊಂದಿಗೆ ಪ್ರತಿಭಟನಾ ನಿರತರು ಪೊಲೀಸರಿಗೆ ಥಳಿಸುತ್ತಿರುವ ವಿಡಿಯೋವನ್ನೂ ಕೂಡ ರಜನಿ ಟ್ವೀಟ್ ಮಾಡಿದ್ದಾರೆ. 
ತಮಿಳು ನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ನೀರು ಹಂಚಿಕೆ ಕುರಿತಾಗಿ ಈಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ವಿರೋಧಿಸಿ ಚೆನ್ನೈನಲ್ಲಿನ ಐಪಿಎಲ್‌ ಪಂದ್ಯಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com