ಸುರೇಶ್ ಅವರ ಸಾವಿನಿಂದಾಗಿ ಈಗ ಅವರ ಈಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕಾವೇರಿ ವಿಚಾರವಾಗಿ ನಾನು ಮಾಡಿದ ಭಾಷಣವನ್ನು ಟಿವಿಯಲ್ಲಿ ನೋಡಿದ ಸುರೇಶ್ ತೀವ್ರವಾಗಿ ನೊಂದಿದ್ದರಂತೆ. ಕಾವೇರಿಗಾಗಿ ಬೆಂಕಿ ಹಚ್ಚಿಕೊಂಡು ಪ್ರತಿಭಟನೆ ನಡೆಸುವುದಾಗಿ ಕುಟುಂಬಸ್ಥರಿಗೆ ಹೇಳಿದ್ದನಂತೆ. ಈಗ ಆತ ಸಾವನ್ನಪ್ಪಿದ್ದಾನೆ. ನಾನು ನನ್ನ ಪತ್ನಿ, ಅವರ ತಂದೆ, ಇಡೀ ಕುಟುಂಬಕ್ಕೆ ಏನೆಂದು ಸಾಂತ್ವನ ಹೇಳಲಿ ಎಂದು ತಿಳಿಯುತ್ತಿಲ್ಲ ಎಂದು ವೈಕೋ ಕಣ್ಣೀರಿಟ್ಟರು.