ವಾಘಾ ಗಡಿ: ಭಾರತೀಯ ಯೋಧರ ಕಡೆ ತಿರುಗಿ ಪಾಕ್ ವೇಗಿ ಹಸನ್ ಅಲಿ ಅಸಭ್ಯ ವರ್ತನೆ!

ವಾಘಾ ಗಡಿಯಲ್ಲಿ ಉಭಯ ಸೈನಿಕರ ಧ್ವಜ ಗೌರವದ ವೇಳೆ ಪಾಕಿಸ್ತಾನದ ವೇಗಿ ಹಸನ್ ಅಲಿ ಭಾರತೀಯ ಯೋಧರ ಕಡೆ ತಿರುಗಿ ಅಸಭ್ಯ ವರ್ತನೆ ತೋರಿದ್ದಾರೆ...
ಹಸನ್ ಅಲಿ
ಹಸನ್ ಅಲಿ
Updated on
ನವದೆಹಲಿ: ವಾಘಾ ಗಡಿಯಲ್ಲಿ ಉಭಯ ಸೈನಿಕರ ಧ್ವಜ ಗೌರವದ ವೇಳೆ ಪಾಕಿಸ್ತಾನದ ವೇಗಿ ಹಸನ್ ಅಲಿ ಭಾರತೀಯ ಯೋಧರ ಕಡೆ ತಿರುಗಿ ಅಸಭ್ಯ ವರ್ತನೆ ತೋರಿದ್ದಾರೆ. 
ಉಭಯ ದೇಶದ ಸೈನಿಕರು ಪರಸ್ಪರ ಸೌಹಾರ್ದತೆ ಸಾರುವ ಸಲುವಾಗಿ ವಾಘಾ ಗಡಿಯಲ್ಲಿ ಧ್ವಜ ಗೌರವ ಕಾರ್ಯಕ್ರಮ ನಡೆಸುತ್ತಾರೆ. ಈ ವೇಳೆ ಉಭಯ ದೇಶದವರು ತಮ್ಮ ದೇಶದ ಪರವಾಗಿ ಘೋಷಣೆ ಕೂಗುವುದು ಸಾಮಾನ್ಯ. ಆದರೆ ಒಂದು ದೇಶದವರು ಇನ್ನೊಂದು ದೇಶದವರನ್ನು ಕಿಚಾಯಿಸುವಂತೆ ಏನನ್ನು ಮಾಡುವುದಿಲ್ಲ. 
ಆದರೆ ಪಾಕಿಸ್ತಾನದ ವೇಗಿ ಹಸನ್ ಅಲಿ ಮಾತ್ರ ಭಾರತೀಯ ಯೋಧರನ್ನು ಕಿಚಾಯಿಸುವಂತೆ ಹಾವ ಭಾವ ತೋರಿಸಿ, ತೊಡೆ ತಟ್ಟಿ ಅಭಸ್ಯವಾಗಿ ವರ್ತಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಹಸನ್ ಅಲಿ ಕಾರ್ಯಕ್ಕೆ ಟ್ವೀಟರಿಗರು ಕಿಡಿಕಾರಿದ್ದಾರೆ.
ಸೌಹಾರ್ದಯುತ ಕಾರ್ಯಕ್ರಮದ ವೇಳೆ ಪಾಕ್ ವೇಗಿ ಹಸನ್ ಅಲಿ ವರ್ತನೆ ಕುರಿತಂತೆ ಭಾರತೀಯ ಯೋಧರು ಅಸಮ್ಮತಿ ವ್ಯಕ್ತಪಡಿಸಿದ್ದು ಪ್ರತಿಭಟನೆ ನಡೆಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com