ಮೂಲಗಳ ಪ್ರಕಾರ ಕೇರಳ ಮೂಲದ ಕುಟುಂಬವೊಂದು ತಿರುವನಂತಪುರಂನಿಂದ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ರೈಲಿನ ಮಧ್ಯ ಸೀಟಿನಲ್ಲಿ 9 ವರ್ಷದ ಬಾಲಕಿ ಕೂಡ ಇದ್ದರು. ಶನಿವಾರ ರಾತ್ರಿ ರೈಲು ಸೇಲಂ ಮತ್ತು ಈರೋಡ್ ನಡುವೆ ಸಂಚರಿಸುತ್ತಿದ್ದಾಗ ವಕೀಲ ಬಾಲಕಿಯ ಎದೆ ಭಾಗವನ್ನು ಅಶ್ಲೀಲವಾಗಿ ಮುಟ್ಟಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು, ಕೂಡಲೇ ಎಚ್ಚೆತ್ತ ಪೊಷಕರಿಗೆ ವಿಚಾರ ತಿಳಿಸಿದ್ದಾಳೆ.