ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಅನಾಮಧೇಯ ವ್ಯಕ್ತಿಯಿಂದ ಗುಂಡಿನ ದಾಳಿ
ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಅನಾಮಧೇಯ ವ್ಯಕ್ತಿಯಿಂದ ಗುಂಡಿನ ದಾಳಿ

ದೆಹಲಿ: ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಅನಾಮಧೇಯ ವ್ಯಕ್ತಿಯಿಂದ ಗುಂಡಿನ ದಾಳಿ

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಅನಾಮಧೇಯ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆಂದು ಸೋಮವಾರ ತಿಳಿದುಬಂದಿದೆ...
Published on
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಅನಾಮಧೇಯ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆಂದು ಸೋಮವಾರ ತಿಳಿದುಬಂದಿದೆ. 
ರಾಜಧಾನಿ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದ ಆವರಣದಲ್ಲಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಉಮರ್ ಖಾಲಿದ್ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ವರದಿಗಳು ತಿಳಿಸಿವೆ. 
ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದು, ಕಾರ್ಯಕ್ರಮ ಹಿನ್ನಲೆಯಲ್ಲಿ ಸ್ಥಳಕ್ಕೆ ಹೋಗಿದ್ದವು. ಘಟನೆ ವೇಳೆ ನಾನು ಕೂಡ ಉಮರ್ ಖಾಲಿದ್ ಜೊತೆಯಲ್ಲಿದ್ದೆ. ಟೀ ಅಂಗಡಿ ಬಳಿ ನಿಂತಿದ್ದಾಗ ಬಿಳಿ ಬಣ್ಣದ ಅಂಗಿ ತೊಟ್ಟ ವ್ಯಕ್ತಿಯೊಬ್ಬ ಹತ್ತಿರ ಬಂದಿದ್ದ. ಬಳಿಕ ನಮ್ಮನ್ನು ತಳ್ಳಿ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದ. ಈ ವೇಳೆ ನಿಯಂತ್ರಣ ಕಳೆದುಕೊಂಡ ಖಾಲಿದ್ ಕೆಳಗೆ ಬಿದ್ದ. ಈ ವೇಳೆ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ. ಕೂಡಲೇ ದಾಳಿಕೋರನನ್ನು ಹಿಡಿಯಲು ನಾವು ಯತ್ನ ನಡೆಸಿದ್ದೆವು. ಆದರೆ, ಈ ವೇಳೆ ಆತ ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದೆ. ಬಳಿಕ ಆತನ ಕೈಯಿಂದ ಪಿಸ್ತೂಲ್ ಕೆಳಗೆ ಬಿದ್ದಿತು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com