ಅಂತೆಯೇ ರಷ್ಯಾ ನಿರ್ಮಿತ ಎಂಐ-17ಮತ್ತು ಎಂಐ18 ಹೆಲಿಕಾಪ್ಟರ್ ಕುರಿತು ಮಾತನಾಡಿದ ಸರ್ಗೆ ಕೆಮೆಶೋವ್, ಎಂಐ ಹೆಲಿಕಾಪ್ಟರ್ ಗಳು ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಇದೇ ರೀತಿ ಎಂಐ171ಎ2 ಹೆಲಿಕಾಪ್ಟರ್ ಬಹುಪಯೋಗಿ ಹೆಲಿಕಾಪ್ಟರ್ ಗಳಾಗಿದ್ದು, ಶಕ್ತಿಶಾಲಿ ಇಂಧನ ವ್ಯವಸ್ಥೆ, ವೇಗವನ್ನು ಹೊಂದಿವೆ. ಈ ಹಿಂದೆ ಇದ್ದ ಹೆಲಿಕಾಪ್ಟರ್ ಗಳಿಗಿಂತ ಈಗಿನ ಹೆಲಿಕಾಪ್ಟರ್ ಗಳು ಅಪ್ ಗ್ರೇಡ್ ಆಗಿದ್ದು, ಅವುಗಳ ರೋಟರ್, ಗೇರ್ ಸಿಸ್ಟಮ್ಸ್ ಮತ್ತು ಫ್ಯೂಸ್ಲೇಜ್ ಮತ್ತು ಸುಧಾರಿತ ಏವಿಯೋನಿಕ್ಸ್ ಅನ್ನು ನವೀಕರಿಸಲಾಗಿದೆ. ಹೆಲಿಕಾಪ್ಟರ್ ನಲ್ಲಿ ಈ ವರೆಗೂ ಸುಮಾರು 80 ವಿಭಾಗಗಳನ್ನು ಆಧುನೀಕರಿಸಲಾಗಿದೆ ಎಂದು ತಿಳಿಸಿದರು.