ಹೌದು... ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂದರೆ ಜೂನ್ 12, 1999ರ ರಾತ್ರಿ ಟೊಲೊಲಿಂಗ್ ನಲ್ಲಿ ಪಾಕಿಸ್ತಾನ ಸೈನಿಕರ ಗುಂಡೇಟಿಗೆ ಬಲಿಯಾಗಿದ್ದ ಲ್ಯಾನ್ಸ್ ನಾಯಕ್ ಬಚನ್ ಸಿಂಗ್ ಅವರ ಪುತ್ರ ಹಿತೇಶ್ ಕುಮಾರ್, ತಮ್ಮ ತಂದೆ ಸೇವೆ ಸಲ್ಲಿಸಿದ ರಜಪೂತ್ ರೈಫಲ್ಸ್‌ನ 2ನೇ ಬೆಟಾಲಿಯನ್ ಸೇರಿದ್ದಾರೆ. ತಂದೆ ಬಚನ್ ಸಿಂಗ್ ಹುತಾತ್ಮರಾದಾಗ ಅವರ ಪುತ್ರ ಹಿತೇಶ್‌ಗೆ ಕೇವಲ ಆರು ವರ್ಷ ವಯಸ್ಸಾಗಿತ್ತು. ಇನ್ನು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ಬಚನ್ ಸಿಂಗ್ ಸ್ಮರಣಾರ್ಥ ಮುಜಾಫರ್‌ನಗರದಲ್ಲಿ ಸಿವಿಲ್ ಲೈನ್ ಪ್ರದೆಶಕ್ಕೆ ಅವರ ಹೆಸರನ್ನೇ ಇಡಲಾಗಿದೆ.